ಸಾರಾಂಶ
ಬೆಂಗಳೂರು ಮೂಲದ ಸ್ಟಾರ್ಟಪ್ ದಿಗಂತರ, ಭವಿಷ್ಯದ ಚಂದ್ರಯಾನಗಳಿಗೆ ಹಾನಿ ಮಾಡಬಹುದಾದ ಬಾಹ್ಯಾಕಾಶ ಶಿಲಾ ಅವಶೇಷಗಳನ್ನು ಪತ್ತೆಹಚ್ಚಲು ಚಂದ್ರನ ಸುತ್ತಲಿನ ಕಕ್ಷೆಯ ನಕ್ಷೆಯನ್ನು ರಚಿಸಲು ಜಪಾನಿನ ಐಸ್ಪೇಸ್ ಇಂಕ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಶುಕ್ರವಾರ ಘೋಷಿಸಿದೆ.
ಭವಿಷ್ಯದ ಚಂದ್ರಯಾನಗಳಿಗೆ ಯೋಜನೆ ನೆರವುಮೋದಿ ಜಪಾನ್ ಭೇಟಿ ವೇಳೆ ಒಪ್ಪಂದಕ್ಕೆ ಅಂಕಿತಪಿಟಿಐ ನವದೆಹಲಿ
ಬೆಂಗಳೂರು ಮೂಲದ ಸ್ಟಾರ್ಟಪ್ ದಿಗಂತರ, ಭವಿಷ್ಯದ ಚಂದ್ರಯಾನಗಳಿಗೆ ಹಾನಿ ಮಾಡಬಹುದಾದ ಬಾಹ್ಯಾಕಾಶ ಶಿಲಾ ಅವಶೇಷಗಳನ್ನು ಪತ್ತೆಹಚ್ಚಲು ಚಂದ್ರನ ಸುತ್ತಲಿನ ಕಕ್ಷೆಯ ನಕ್ಷೆಯನ್ನು ರಚಿಸಲು ಜಪಾನಿನ ಐಸ್ಪೇಸ್ ಇಂಕ್ ಸಂಸ್ಥೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದಾಗಿ ಶುಕ್ರವಾರ ಘೋಷಿಸಿದೆ.ಎರಡೂ ಸಂಸ್ಥೆಗಳು ಸೇರಿ ಸಾವಿರಾರು ಉಪಗ್ರಹಗಳಿಂದ ತುಂಬಿರುವ ಭೂಮಿಯ ಕೆಳ ಕಕ್ಷೆಯ ಗೂಗಲ್ ಮ್ಯಾಪ್ ರಚಿಸಲಿವೆ. ಚಂದ್ರ ಮತ್ತು ಭೂಮಿಯ ನಡುವಿನ ವಾತಾವರಣವನ್ನು ಪರೀಕ್ಷಿಸಿ, ಅಗತ್ಯ ಮೂಲಸೌಕರ್ಯಗಳನ್ನು ಸ್ಥಾಪಿಸಲು ಕೆಲಸ ಮಾಡಲಿವೆ. ಇದು ಭವಿಷ್ಯದ ಚಂದ್ರಯಾನ ಯೋಜನೆಗಳಿಗೆ ನೆರವಾಗಲಿವೆ.‘ದಿಗಂತರ ಮತ್ತು ಐಸ್ಪೇಸ್‌ನ ಸಂಯೋಜನೆಯ ಮೂಲಕ, ಚಂದ್ರನ ಸುತ್ತ ದೀರ್ಘಕಾಲೀನ ಮೂಲಸೌಕರ್ಯ, ಲಾಜಿಸ್ಟಿಕ್ಸ್ ಮತ್ತು ಸಂಪನ್ಮೂಲ ಬಳಕೆಗೆ ಅಡಿಪಾಯ ಹಾಕುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ದಿಗಂತರ ಹೇಳಿಕೆ ನೀಡಿದೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿಯವರ ಜಪಾನ್ ಭೇಟಿ ವೇಳೆ ಈ ಪಾಲುದಾರಿಕೆಯನ್ನು ಅಂತಿಮಗೊಳಿಸಲಾಗಿದೆ.