ಕನ್ನಡದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಸೋದರ ಸಂಬಂಧಿ ಬಹುಭಾಷಾ ನಟ ಡೇನಿಯಲ್ ಬಾಲಾಜಿ  ಹೃದಯಾಘಾತದಿಂದ ಶನಿವಾರ ಸಾವನ್ನಪ್ಪಿದ್ದಾರೆ.

ಚೆನ್ನೈ: ಕನ್ನಡದ ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ ಸೋದರ ಸಂಬಂಧಿ ಬಹುಭಾಷಾ ನಟ ಡೇನಿಯಲ್ ಬಾಲಾಜಿ (48) ಹೃದಯಾಘಾತದಿಂದ ಶನಿವಾರ ಸಾವನ್ನಪ್ಪಿದ್ದಾರೆ. ಡೇನಿಯಲ್‌ಗೆ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಬಾಲಾಜಿ ಅವರು ತಮಿಳು ಚಿತ್ರರಂಗದ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದ್ದರು. ಚಿಥಿ ಧಾರಾವಾಹಿದಿಂದ ಖ್ಯಾತಿ ಪಡೆದಿದ್ದರು. ಆ ಧಾರಾವಾಹಿಯಲ್ಲಿನ ಪಾತ್ರದ ಹೆಸರಾದ ಡೇನಿಯಲ್‌ ಅವರಿಗೆ ಕೊನೆಯವರೆಗೂ ಅಂಟಿಕೊಂಡಿತ್ತು.

ಬಳಿಕ ಕಾಖಾ ಕಾಖಾ, ಪೊಲ್ಲಾಧವನ್, ವೆಟ್ವೈಯಾಡು, ವಿಲಾಯಾಡು, ವಡಾ ಚಿನ್ವೈ, ಬಿಗಿಲ್ ಸೇರಿ 40 ಚಿತ್ರಗಳಲ್ಲಿ ನಟಿಸಿದ್ದರು.

ಕನ್ನಡದಲ್ಲಿ ಯಶ್ ಅಭಿನಯದ ಕಿರಾತಕ, ಬೆಂಗಳೂರು ಅಂಡರ್‌ವಲ್ಡ್‌, ಡವ್‌, ಶಿವಾಜಿನಗರ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.