ಕುಮಾರ ಪಾರ್ಕ್‌ನ ಸರ್ಕಾರಿ ನಿವಾಸದಲ್ಲೇ ಇನ್ನು ಡಿಕೆಶಿ ಲಭ್ಯ

| Published : Jun 13 2024, 01:47 AM IST / Updated: Jun 13 2024, 05:16 AM IST

DK Shivakumar
ಕುಮಾರ ಪಾರ್ಕ್‌ನ ಸರ್ಕಾರಿ ನಿವಾಸದಲ್ಲೇ ಇನ್ನು ಡಿಕೆಶಿ ಲಭ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸದಾಶಿವನಗರ ನಿವಾಸಕ್ಕೆ ಬಾರದಂತೆ ಡಿಕೆಶಿ ಸೂಚನೆ ನೀಡಿದ್ದು, ಇನ್ನು ಕುಮಾರಪಾರ್ಕ್ ಸರ್ಕಾರಿ ನಿವಾಸದಲ್ಲೇ ಲಭ್ಯವಿರಲಿದ್ದಾರೆ.

 ಬೆಂಗಳೂರು  :  ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಇನ್ನು ಮುಂದೆ ಕುಮಾರಪಾರ್ಕ್‌ ಪೂರ್ವದಲ್ಲಿ ತಮಗೆ ನೀಡಿರುವ ಸರ್ಕಾರಿ ನಿವಾಸದಲ್ಲಿಯೇ ಸಾರ್ವಜನಿಕರ ಭೇಟಿ ಹಾಗೂ ಇಲಾಖಾ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.

ಡಿಎಪಿಆರ್‌ ಇಲಾಖೆಯು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರಿಗೆ ಕಳೆದ 10 ತಿಂಗಳ ಹಿಂದೆಯೇ ಗಾಂಧಿಭವನ ರಸ್ತೆಯ ಕುಮಾರಪಾರ್ಕ್‌ ಪೂರ್ವದಲ್ಲಿನ ಸರ್ಕಾರಿ ನಿವಾಸವನ್ನು ನಿಗದಿ ಮಾಡಿದ್ದರೂ, ಈವರೆಗೆ ಡಿ.ಕೆ.ಶಿವಕುಮಾರ್‌ ಅಲ್ಲಿಗೆ ತೆರಳಿರಲಿಲ್ಲ. 

ಇದೀಗ ಕುಮಾರಪಾರ್ಕ್ ಪೂರ್ವದ ಸರ್ಕಾರಿ ನಿವಾಸದಿಂದಲೇ ತಮ್ಮ ಕಾರ್ಯಚಟುವಟಿಕೆ ನಡೆಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಸದಾಶಿವನಗರದ ತಮ್ಮ ಖಾಸಗಿ ನಿವಾಸಕ್ಕೆ ಯಾರೂ ಬರಬಾರದು ಹಾಗೂ ಕುಮಾರಪಾರ್ಕ್‌ ಪೂರ್ವದ ನಿವಾಸದಲ್ಲಿಯೇ ತಮ್ಮನ್ನು ಭೇಟಿಯಾಗಲು ಬರುವವರನ್ನು ಸಂಪರ್ಕಿಸುವುದಾಗಿಯೂ ಹೇಳಿದ್ದಾರೆ.