ಸಾರಾಂಶ
ತಮಿಳು ನಟ ವಿಜಯ್ ಸ್ಥಾಪಿಸಿರುವ ವೆಟ್ರಿ ಕಳಗಂ(ಟಿವಿಕೆ)ಪಕ್ಷ ಸಿದ್ಧಾಂತವನ್ನು ಡಿಎಂಕೆ ಮತ್ತು ಎಐಎಡಿಎಂಕೆ ಭಾರೀ ಟೀಕಿಸಿವೆ. ‘ಇದು ತಮ್ಮ ಪಕ್ಷದ ಸಿದ್ಧಾಂತದ ನಕಲು’ ಎಂದು ಡಿಎಂಕೆ ಹೇಳಿದರೆ, ‘ಟಿವಿಕೆ ಹಳೆ ಬಾಟಲ್‌ನಲ್ಲಿ ಹೊಸ ವೈನ್‌ನಂತಿದೆ’ ಎಂದು ಎಐಎಡಿಎಂಕೆ ವ್ಯಂಗ್ಯವಾಡಿದೆ.
ಚೆನ್ನೈ: ತಮಿಳು ನಟ ವಿಜಯ್ ಸ್ಥಾಪಿಸಿರುವ ವೆಟ್ರಿ ಕಳಗಂ(ಟಿವಿಕೆ)ಪಕ್ಷ ಸಿದ್ಧಾಂತವನ್ನು ಡಿಎಂಕೆ ಮತ್ತು ಎಐಎಡಿಎಂಕೆ ಭಾರೀ ಟೀಕಿಸಿವೆ. ‘ಇದು ತಮ್ಮ ಪಕ್ಷದ ಸಿದ್ಧಾಂತದ ನಕಲು’ ಎಂದು ಡಿಎಂಕೆ ಹೇಳಿದರೆ, ‘ಟಿವಿಕೆ ಹಳೆ ಬಾಟಲ್‌ನಲ್ಲಿ ಹೊಸ ವೈನ್‌ನಂತಿದೆ’ ಎಂದು ಎಐಎಡಿಎಂಕೆ ವ್ಯಂಗ್ಯವಾಡಿದೆ.
ಭಾನುವಾರ, ನಟ ವಿಜಯ್ ಮೊದಲ ಬಾರಿಗೆ ಪಕ್ಷದ ಸಮಾವೇಶದಲ್ಲಿ ಬಹಿರಂಗವಾಗಿ ಮಾತನಾಡಿದ್ದರು. ಈ ವೇಳೆ ನಟ ಆಡಳಿತರೂಢ ಡಿಎಂಕೆ ವಿರುದ್ಧ ಹರಿಹಾಯ್ದಿದ್ದರು. ಒಂದು ಕುಟುಂಬ ಇಡೀ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದಿದ್ದರು. ಅಲ್ಲದೇ ದ್ರಾವೀಡ ರಾಷ್ಟ್ರೀಯತೆ, ತಮಿಳು ರಾಷ್ಟ್ರೀಯತೆ ಬಗ್ಗೆ ಹೇಳಿದ್ದರು. ಇದಕ್ಕೆ ಡಿಎಂಕೆ ಪ್ರತಿಕ್ರಿಯಿಸಿದ್ದು, ಡಿಎಂಕೆ ಸುದೀರ್ಘ ಇತಿಹಾಸದಲ್ಲಿ ಹಲವು ವೈರಿಗಳನ್ನು ಕಂಡಿದೆ. ಇದು ಮುಂದುವರೆಯುತ್ತದೆ. ಇವೆಲ್ಲವೂ ನಮ್ಮ ತತ್ವಗಳು. ಅದನ್ನು ಅವರು ನಕಲು ಮಾಡಿದ್ದಾರೆ. ಈಗ ಅವರು ಏನು ಹೇಳಿದ್ದಾರೋ ಅದೆಲ್ಲವನ್ನೂ ನಾವು ಮುಂಚೆ ಹೇಳಿದ್ದೇವೆ ಮತ್ತು ಅನುಸರಿಸುತ್ತಿದ್ದೇವೆ’ ಎಂದಿದೆ.
ಇತ್ತ ಎಐಎಡಿಎಂಕೆ ಕೂಡ ಪ್ರತಿಕ್ರಿಯಿಸಿದ್ದು‘ಎಲ್ಲ ಪಕ್ಷಗಳ ಸಿದ್ಧಾಂತ ಮತ್ತು ಹಳೆಯ ವೈನ್ ಹೊಸ ಬಾಟಲಿಯಲ್ಲಿ ಮಿಶ್ರಣವಾಗಿದೆ. ಟಿವಿಕೆ ಸಿದ್ಧಾಂತವು ತಮಿಳುನಾಡಿನ ಎಲ್ಲ ರಾಜಕೀಯ ಪಕ್ಷಗಳಿಂದ ತೆಗೆದುಕೊಂಡ ಕಾಕ್ಟೈಲ್ ಸಿದ್ಧಾಂತ’ ಎಂದಿದೆ.