ಮೊದಲೆಲ್ಲಾ ಮನೆ ಕಾಯುವ ಕೆಲಸಕ್ಕೆ ಸೀಮಿತವಾಗಿದ್ದ ನಾಯಿಗಳು, ಕಾಲಕ್ರಮೇಣ ಮನೆಯ ಸದಸ್ಯರಾಗಿ ಭಡ್ತಿ ಪಡೆದಿದ್ದವು. ಆದರೆ ಈ ಪದೋನ್ನತಿ ಇಲ್ಲಿಗೇ ನಿಂತಿಲ್ಲ. ಇಲ್ಲಿನ ಕಂಪನಿಯೊಂದು ‘ಡೆನ್ವರ್’ ಹೆಸರಿನ ಗೋಲ್ಡನ್‌ ರಿಟ್ರೀವರ್‌ ಶ್ವಾನವನ್ನು ಮುಖ್ಯ ಸಂತೋಷಾಧಿಕಾರಿ ಹುದ್ದೆಗೆ ನೇಮಿಸಿದೆ.

 ಹೈದರಾಬಾದ್‌: ಮೊದಲೆಲ್ಲಾ ಮನೆ ಕಾಯುವ ಕೆಲಸಕ್ಕೆ ಸೀಮಿತವಾಗಿದ್ದ ನಾಯಿಗಳು, ಕಾಲಕ್ರಮೇಣ ಮನೆಯ ಸದಸ್ಯರಾಗಿ ಭಡ್ತಿ ಪಡೆದಿದ್ದವು. ಆದರೆ ಈ ಪದೋನ್ನತಿ ಇಲ್ಲಿಗೇ ನಿಂತಿಲ್ಲ. ಇಲ್ಲಿನ ಕಂಪನಿಯೊಂದು ‘ಡೆನ್ವರ್’ ಹೆಸರಿನ ಗೋಲ್ಡನ್‌ ರಿಟ್ರೀವರ್‌ ಶ್ವಾನವನ್ನು ಮುಖ್ಯ ಸಂತೋಷಾಧಿಕಾರಿ ಹುದ್ದೆಗೆ ನೇಮಿಸಿದೆ. 

ಲೇಸರ್ ಮೂಲಕ ಕಳೆ ತೆಗೆಯುವ ಮತ್ತು ಕೊಯ್ಲಿಗೆ ರೊಬೊಟ್‌ಗಳ ಬಳಕೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಈ ಕಂಪನಿಯ ಸಿಇಒ ರಾಹುಲ್‌ ಅರೆಪಾಕ ತಮ್ಮ ಲಿಂಕ್ಡ್‌ಇನ್‌ನಲ್ಲಿ, ‘ಡೆನ್ವರ್‌ನನ್ನು ನಮ್ಮ ಕಂಪನಿಯ ಮುಖ್ಯ ಸಂತೋಷಾಧಿಕಾರಿಯಾಗಿ ನೇಮಿಸಿಕೊಂಡಿದ್ದೇವೆ. ಈತ ಯಾವುದೇ ಕೋಡಿಂಗ್‌ ಮಾಡುವುದಿಲ್ಲ. ಬದಲಿಗೆ ದಿನವೂ ಬಂದು ಎಲ್ಲರ ಮನಸ್ಸುಗಳನ್ನು ಕದ್ದು, ಕೆಲಸ ಮಾಡಲು ಶಕ್ತಿ ತುಂಬುತ್ತಾನೆ. ಇದು ನಾವು ತೆಗೆದುಕೊಂಡಿರುವ ಉತ್ತಮ ನಿರ್ಧಾರ’ ಎಂದು ಪೋಸ್ಟ್‌ ಮಾಡಿದ್ದಾರೆ.

ಈ ನಾಯಿಯ ಉಪಸ್ಥಿತಿಯಿಂದ ಉದ್ಯೋಗಿಗಳಲ್ಲಿ ಉತ್ಸಾಹ ಮತ್ತು ಬಾಂಧವ್ಯ ಇಮ್ಮಡಿಯಾಗಿ, ಕಚೇರಿಯ ವಾತಾವರಣದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದು ಅವರ ಕೆಲಸವನ್ನು ಉತ್ತಮಗೊಳಿಸಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ ಎನ್ನಲಾಗಿದೆ.