ಸಾರಾಂಶ
ಮನೆ ಸಮೀಪ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಸೆಣಸಾಡಿ ಕೊಂದು ಹತ್ತು ತುಂಡು ಮಾಡಿದ ಪಿಟ್‌ಬುಲ್ ಶ್ವಾನ ಕಡೆಗೆ ತಾನೂ ಸಾವನ್ನಪ್ಪಿದ ಘಟನೆ ಬುಧವಾರ ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ನಡೆದಿದೆ.
ಹಾಸನ : ಮನೆ ಸಮೀಪ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಸೆಣಸಾಡಿ ಕೊಂದು ಹತ್ತು ತುಂಡು ಮಾಡಿದ ಪಿಟ್‌ಬುಲ್ ಶ್ವಾನ ಕಡೆಗೆ ತಾನೂ ಸಾವನ್ನಪ್ಪಿದ ಘಟನೆ ಬುಧವಾರ ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಶಮಂತ್ ತೋಟದಲ್ಲಿ ಭೀಮ ಹೆಸರಿನ ಪಿಟ್‌ಬುಲ್ - ಡಾಬರ್‌ಮನ್ ತಳಿ ನಾಯಿ ಸಾಕಿದ್ದಾರೆ. ಮನೆಯ ಬಳಿ ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಿಳಿ ಬಣ್ಣದ ಕಾಳಿಂಗ ಸರ್ಪ ಬಂದು ಸಮೀಪವೇ ಇದ್ದ ತೆಂಗಿನ ಗರಿ ಕೆಳಗೆ ಹೋಗಿದೆ.
ಇದನ್ನು ಕಂಡ ನಾಯಿಗಳು ಹಾವನ್ನು ಕಚ್ಚಿ ಎಳೆದಾಡಿವೆ. ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಪಿಟ್‌ಬುಲ್ ನಾಯಿ ಮುಖ ಭಾಗಕ್ಕೆ ಹಾವು ಕಚ್ಚಿದೆ. ಆದ ಕಾರಣ ಶ್ವಾನ ಸಾವನ್ನಪ್ಪಿದೆ. ಈ ಶ್ವಾನ ಹಲವು ಡಾಗ್ ಶೋನಲ್ಲಿ ಬಹುಮಾನ ಪಡೆದಿತ್ತು. ನೆಚ್ಚಿನ ಸಾಕು ನಾಯಿ ಕಳೆದುಕೊಂಡ ಶಮಂತ್ ಕುಟುಂಬಸ್ಥರು ಕಂಬನಿ ಮಿಡಿದಿದ್ದಾರೆ.