ಸಾರಾಂಶ
ಯುವಕರು ಸ್ವಾರ್ಥ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಮಿಷನ್ (ಗುರಿ) ಇರಿಸಿಕೊಂಡು ರಾಜಕೀಯಕ್ಕೆ ಬರಬೇಕು. ಅಗ ಅವರು ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಸಾಧ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ನವದೆಹಲಿ : 'ಯುವಕರು ಸ್ವಾರ್ಥ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಮಿಷನ್ (ಗುರಿ) ಇರಿಸಿಕೊಂಡು ರಾಜಕೀಯಕ್ಕೆ ಬರಬೇಕು. ಅಗ ಅವರು ಯಶಸ್ವಿ ರಾಜಕಾರಣಿ ಎನ್ನಿಸಿಕೊಳ್ಳಲು ಸಾಧ್ಯ' ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
ಶುಕ್ರವಾರ ಕನ್ನಡಿಗ ಉದ್ಯಮಿ ನಿಖಿಲ್ ಕಾಮತ್ ಅವರ 'ಡಬ್ಲ್ಯುಟಿಎಫ್' ಪೋಡ್‌ಕಾಸ್ಟ್‌ನಲ್ಲಿ ಮೋದಿ 2 ತಾಸು ಕಾಲ ಆನೇಕ ವಿಷಯಗಳ ಬಗ್ಗೆ ಮಾತನಾಡಿದರು. ಇದು ಮೋದಿ ಅವರ ಮೊದಲ ಪೋಡ್‌ಕಾಸ್ಟ್ ಕೂಡ ಹೌದು. 'ರಾಜಕೀಯಕ್ಕೆ ಬರುವುದು ಬೇರೆ, ರಾಜಕೀಯದಲ್ಲಿ ಯಶಸ್ವಿಯಾಗುವುದು ಬೇರೆ. ನೀವು ಒಂದು ತಂಡದ ಆಟಗಾರರಾಗಿ ಕೆಲಸ ಮಾಡಿದಾಗ ಮತ್ತು ಜನರ ಕಲ್ಯಾಣಕ್ಕೆ ಸಮರ್ಪಿತರಾದಾಗ ಮಾತ್ರ ಯಶಸ್ವಿ ರಾಜಕಾರಣಿ ಆಗುತ್ತೀರಿ. ಜನರು ಯಾವುದೋ (ಸ್ವಾರ್ಥ) ಉದ್ದೇಶ ಇರಿಸಿಕೊಂಡು ರಾಜಕೀಯಕ್ಕೆ ಬರಬಾರದು. ಸ್ವಾರ್ಥಿ ರಾಜಕಾರಣಿಗಳಿಗೆ ಉಳಿಗಾಲವಿಲ್ಲ' ಎಂದರು.