85 ವರ್ಷಗಳ ಹಿಂದೆ 1940ರಲ್ಲಿಯೇ ಸಂಘದ ಶಾಖೆಗೆ ಸಂವಿಧಾನಶಿಲ್ಪಿ ಅಂಬೇಡ್ಕರ್‌ ಭೇಟಿ : ಆರೆಸ್ಸೆಸ್‌

| Published : Jan 03 2025, 12:31 AM IST / Updated: Jan 03 2025, 04:58 AM IST

Dr BR Ambedkar's death anniversary

ಸಾರಾಂಶ

 ಆರ್‌ಎಸ್‌ಎಸ್‌ ದಲಿತ ವಿರೋಧಿ ನಿಲುವನ್ನು ಹೊಂದಿದೆ ಎನ್ನುವ ಆರೋಪಗಳ ನಡುವೆಯೇ ‘85 ವರ್ಷಗಳ ಹಿಂದೆ ಅಂದರೆ 1940ರಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್‌ ಅವರ ಮಹಾರಾಷ್ಟ್ರದ ಆರ್‌ಎಸ್‌ಎಸ್‌ನ ಶಾಖಾ ಕಚೇರಿಗೆ ಭೇಟಿ ನೀಡಿದ್ದರು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧ್ಯಮ ವಿಭಾಗ ಹೇಳಿದೆ.

ನವದೆಹಲಿ: ಆರ್‌ಎಸ್‌ಎಸ್‌ ದಲಿತ ವಿರೋಧಿ ನಿಲುವನ್ನು ಹೊಂದಿದೆ ಎನ್ನುವ ಆರೋಪಗಳ ನಡುವೆಯೇ ‘85 ವರ್ಷಗಳ ಹಿಂದೆ ಅಂದರೆ 1940ರಲ್ಲಿ ಸಂವಿಧಾನಶಿಲ್ಪಿ ಅಂಬೇಡ್ಕರ್‌ ಅವರ ಮಹಾರಾಷ್ಟ್ರದ ಆರ್‌ಎಸ್‌ಎಸ್‌ನ ಶಾಖಾ ಕಚೇರಿಗೆ ಭೇಟಿ ನೀಡಿದ್ದರು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಾಧ್ಯಮ ವಿಭಾಗ ಹೇಳಿದೆ.

ಆರ್‌ಎಸ್‌ಎಸ್‌ನ ಸಂವಹನ ವಿಭಾಗವಾದ ವಿಶ್ವ ಸಂವಾದ ಕೇಂದ್ರದ ವಿದರ್ಭ ಪ್ರಾಂತ ಈ ಬಗ್ಗೆ ಹೇಳಿಕೊಂಡಿದೆ.

‘ಆರ್‌ಎಸ್‌ಎಸ್‌ ದಲಿತ ವಿರೋಧಿ ಎನ್ನುವ ಆರೋಪವಿದೆ. ಡಾ.ಅಂಬೇಡ್ಕರ್‌ ಮತ್ತು ಆರ್‌ಎಸ್‌ಎಸ್‌ ಬಗ್ಗೆ ತಪ್ಪು ಮಾಹಿತಿ ಹರಡಲಾಗುತ್ತಿದೆ. ಆದರೆ ಅಂಬೇಡ್ಕರ್‌ ಅವರು ಸತಾರಾ ಜಿಲ್ಲೆಯ ಕರಾಡ್‌ನಲ್ಲಿ ಆರ್‌ಎಸ್‌ಎಸ್ ಶಾಖಾಗೆ 1940 ಜ.2ರಂದು ಭೇಟಿ ನೀಡಿದ್ದರು. ಅಲ್ಲಿ ಅವರು ಸಂಘದ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿದ್ದರು. ನಮ್ಮ ಸಿದ್ಧಾಂತಗಳಲ್ಲಿ ಭಿನ್ನಾಭಿಪ್ರಾಯವಿದ್ದರೂ ಸಂಘವನ್ನು ಬಾಂಧವ್ಯದಿಂದ ನೋಡುತ್ತೇನೆ’ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ ಎಂದು 1940ರಲ್ಲಿ ‘ಮರಾಠಿ’ ಪತ್ರಿಕೆ ಪ್ರಕಟಿಸಿರುವ ವರದಿಯನ್ನೂ ಅದು ಉಲ್ಲೇಖಿಸಿದೆ.

ಗಾಂಧಿಗೂ ನಂಟಿತ್ತು:

1934ರಲ್ಲಿ ವಾರ್ಧದಲ್ಲಿ ನಡೆದ ಆರ್‌ಎಸ್‌ಎಸ್‌ ಶಿಬಿರದಲ್ಲಿ ಗಾಂಧೀಜಿ ಪಾಲ್ಗೊಂಡಿದ್ದರು. ಬೇರೆ ಬೇರೆ ಜಾತಿಯವರು ಪಾಲ್ಗೊಂಡಿದ್ದರು. ಅಲ್ಲಿ ಸ್ವಯಂಸೇವಕರ ಒಗ್ಗಟ್ಟು ಮೆಚ್ಚಿದ್ದರು. ಅಲ್ಲದೇ ಆರ್‌ಎಸ್‌ಎಸ್‌ ಸ್ಥಾಪಕ ಹೆಡ್ಗೆವಾರ್‌ ಅವರಿಗೆ ಅಸ್ಪ್ರಶ್ಯತೆ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಭಿನಂಧಿಸಿದ್ದರು ಎಂದಿದ್ದಾರೆ.