ಜಗದೀಶನ್‌ಗೆ ಕೈತಪ್ಪಿದ ದ್ವಿಶತಕ!

| Published : Sep 06 2025, 01:00 AM IST

ಸಾರಾಂಶ

ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಔಟಾಗದೆ 148 ರನ್‌ ಗಳಿಸಿದ್ದ ಎನ್‌.ಜಗದೀಶನ್‌ ಶುಕ್ರವಾರ 197 ರನ್‌ಗೆ ಔಟಾಗುವ ಮೂಲಕ ದ್ವಿಶತಕದಿಂದ ವಂಚಿತರಾದರು.

- ದುಲೀಪ್‌ ಟ್ರೋಫಿ: ಉತ್ತರ ವಿರುದ್ಧ ದಕ್ಷಿಣ ವಲಯ 536 ರನ್‌

- ಜಗ್ಗಿ 197ಕ್ಕೆ ಔಟ್‌ । ಪಶ್ಚಿಮ 438, ಕೇಂದ್ರ ವಲಯ 229ಕ್ಕೆ2ಬೆಂಗಳೂರು: ದುಲೀಪ್‌ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರ ವಲಯ ವಿರುದ್ಧ ದಕ್ಷಿಣ ವಲಯ ಮೊದಲ ಇನ್ನಿಂಗ್ಸ್‌ನಲ್ಲಿ 536 ರನ್‌ಗಳ ಬೃಹತ್‌ ಮೊತ್ತ ಕಲೆಹಾಕಿದೆ. ಮೊದಲ ದಿನದಂತ್ಯಕ್ಕೆ ಔಟಾಗದೆ 148 ರನ್‌ ಗಳಿಸಿದ್ದ ಎನ್‌.ಜಗದೀಶನ್‌ ಶುಕ್ರವಾರ 197 ರನ್‌ಗೆ ಔಟಾಗುವ ಮೂಲಕ ದ್ವಿಶತಕದಿಂದ ವಂಚಿತರಾದರು.

ಕೆಳ ಕ್ರಮಾಂಕದಿಂದಲೂ ಉತ್ತಮ ಕೊಡುಗೆ ಮೂಡಿಬಂದ ಕಾರಣ, ದಕ್ಷಿಣ ವಲಯ ದೊಡ್ಡ ಮೊತ್ತ ಪೇರಿಸಿತು. ಇನ್ನು ಪಶ್ಚಿಮ ವಲಯವನ್ನು ಮೊದಲ ಇನ್ನಿಂಗ್ಸ್‌ನಲ್ಲಿ 438 ರನ್‌ಗೆ ಆಲೌಟ್‌ ಮಾಡಿದ ಕೇಂದ್ರ ವಲಯ, 2ನೇ ದಿನದಂತ್ಯಕ್ಕೆ 2 ವಿಕೆಟ್‌ ನಷ್ಟಕ್ಕೆ 229 ರನ್‌ ಗಳಿಸಿದೆ. ಶುಭಂ ಶರ್ಮಾ 60, ನಾಯಕ ರಜತ್‌ ಪಾಟೀದಾರ್‌ 47 ರನ್‌ ಗಳಿಸಿ ಔಟಾಗದೆ ಉಳಿದಿದ್ದು, ತಂಡ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸುವ ವಿಶ್ವಾಸದಲ್ಲಿದೆ. ಪಂದ್ಯದಲ್ಲಿ ಇನ್ನೂ 2 ದಿನ ಬಾಕಿ ಇದೆ.