ಬಿಜೆಪಿ ನೇತೃತ್ವದ ಮೈತ್ರಿಕೂಟ ಸೇರಿದ ಬೆನ್ನಲ್ಲೇ ಮಹಾ ಡಿಸಿಎಂ ಅಜಿತ್‌ ಪತ್ನಿಗೆ ಕ್ಲೀನ್‌ಚಿಟ್‌

| Published : Apr 25 2024, 01:05 AM IST / Updated: Apr 25 2024, 05:13 AM IST

ಬಿಜೆಪಿ ನೇತೃತ್ವದ ಮೈತ್ರಿಕೂಟ ಸೇರಿದ ಬೆನ್ನಲ್ಲೇ ಮಹಾ ಡಿಸಿಎಂ ಅಜಿತ್‌ ಪತ್ನಿಗೆ ಕ್ಲೀನ್‌ಚಿಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸೇರಿದ ಬೆನ್ನಲ್ಲೇ ಅವರ ಪತ್ನಿ ಸುನೇತ್ರಾ ಸೇರಿ ಪಕ್ಷದ ಹಲವು ನಾಯಕರಿಗೆ ಮಹಾರಾಷ್ಟ್ರ ಆರ್ಥಿಕ ಅಪರಾಧ ದಳವು ಸಹಕಾರ ಬ್ಯಾಂಕ್‌ ಹಗರಣದಲ್ಲಿ ದೋಷಮುಕ್ತಗೊಳಿಸಿದೆ.

ಮುಂಬೈ: ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಸೇರಿದ ಬೆನ್ನಲ್ಲೇ ಅವರ ಪತ್ನಿ ಸುನೇತ್ರಾ ಸೇರಿ ಪಕ್ಷದ ಹಲವು ನಾಯಕರಿಗೆ ಮಹಾರಾಷ್ಟ್ರ ಆರ್ಥಿಕ ಅಪರಾಧ ದಳವು ಸಹಕಾರ ಬ್ಯಾಂಕ್‌ ಹಗರಣದಲ್ಲಿ ದೋಷ ಮುಕ್ತಗೊಳಿಸಿದೆ.

ಸುನೇತ್ರಾ ಅವರಿಗೆ ಸೇರಿದ ಜಾರಂಡೇಶ್ವರ ಸಹಕಾರಿ ಶುಗರ್‌ ಮಿಲ್‌ ಗುರು ಕಮೋಡಿಟಿಯಿಂದ ಅತ್ಯಲ್ಪ ಕಡಿಮೆ ಬಾಡಿಗೆ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಥಿಕ ಅಪರಾಧ ದಳ 2020ರಲ್ಲಿ ಪ್ರಕರಣ ದಾಖಲಿಸಿತ್ತು. 

ಇತ್ತೀಚೆಗೆ ಈ ಎರಡು ಸಂಸ್ಥೆಗಳ ನಡುವೆ ಯಾವುದೇ ಅನಧಿಕೃತ ಆರ್ಥಿಕ ವಹಿವಾಟು ನಡೆದಿಲ್ಲ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವರಿಗೆ ಕ್ಲೀನ್‌ಚಿಟ್‌ ನೀಡಿದೆ. ಇದರ ಜೊತೆಗೆ ಅವರ ಸೋದರಳಿಯ ರೋಹನ್‌ ಪವಾರ್‌ ಹಾಗೂ ಪಕ್ಷದ ಹಿರಿಯ ನಾಯಕ ಪ್ರಜಕ್ತ್‌ ತಾನ್‌ಪುರೆ ಅವರಿಗೂ ಸಹಕಾರ ಬ್ಯಾಂಕ್‌ ಪ್ರಕರಣದಲ್ಲಿ ಕ್ಲೀನ್‌ಚಿಟ್‌ ನೀಡಿದೆ.