ಅಕ್ರಮ ಮರಳು ದಂಧೆ: ಲಾಲು ಆಪ್ತ ಸುಭಾಷ್‌ ಯಾದವ್‌ ಬಂಧನ

| Published : Mar 11 2024, 01:20 AM IST

ಸಾರಾಂಶ

2 ಕೋಟಿ ರು. ನಗದು ಹಾಗೂ ಹಲವು ದಾಖಲೆಗಳ ವಶಪಡಿಸಿಕೊಂಡು ಅಕ್ರಮ ಮರಳು ದಂಧೆ ಮಾಡುತ್ತಿದ್ದ ಲಾಲು ಕುಟುಂಬದ ಆಪ್ತ ಸುಭಾಷ್‌ ಯಾದವ್‌ನನ್ನು ಜಾರಿ ನಿರ್ದೇಶನಾಲಯ ಬಂಧಿಸಿದೆ.

ಪಟನಾ: ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆರ್‌ಜೆಡಿ ಮುಖಂಡ ಮತ್ತು ಲಾಲು ಪ್ರಸಾದ್‌ ಕುಟುಂಬಕ್ಕೆ ಆಪ್ತನಾಗಿರುವ ಸುಭಾಷ್‌ ಕುಮಾರ್‌ನನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ತಡರಾತ್ರಿ ಬಂಧಿಸಿದೆ. ಇದಕ್ಕೂ ಮೊದಲು ಇಡಿ ಸುಭಾಷ್‌ಗೆ ಸಂಬಂಧಿಸಿದ ಹಲವು ಜಾಗಗಳಲ್ಲಿ ದಾಳಿ ನಡೆಸಿ 2 ಕೋಟಿ ರು. ನಗದು ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿತ್ತು. ಅಲ್ಲದೆ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ವೇಳೆ ಸುಭಾಷ್‌ ನಿರ್ದೇಶಕನಾಗಿರುವ ಸಂಸ್ಥೇ ಮರಳು ಮಾರಾಟಕ್ಕೆ ಇ-ಚಲನ್‌ ನೀಡದೆ 161 ಕೋಟಿ ರು. ಅಕ್ರಮವಾಗಿ ಆದಾಯ ಗಳಿಸಿರುವುದು ಕಂಡು ಬಂದಿತ್ತು.