ಸಾರಾಂಶ
ಕೊಚ್ಚಿ : ಕರುವನ್ನೂರ್ ಸೇವಾ ಸಹಕಾರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ ನಡೆಯುತ್ತಿರುವ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು (ಇ.ಡಿ.), ಕೇರಳದ ಆಡಳಿತಾರೂಢ ಸಿಪಿಎಂನ 10 ಲಕ್ಷ ರು. ಮೌಲ್ಯದ ಒಂದು ಜಮೀನು ಹಾಗೂ ಮತ್ತು 63 ಲಕ್ಷ ರು. ಮೌಲ್ಯದ ಬ್ಯಾಂಕ್ ಠೇವಣಿಗಳನ್ನು ಜಪ್ತಿ ಮಾಡಿದೆ.ಈ ಆಸ್ತಿಗಳನ್ನು ಜಪ್ತಿ ಮಾಡಲು ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ತಾತ್ಕಾಲಿಕ ಆದೇಶವನ್ನು ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಸಿಪಿಎಂ ತಾನು ಯಾವುದೇ ತಪ್ಪು ಮಾಡಿಲ್ಲ ಹಾಗೂ ಅಕ್ರಮ ಹಣ ವರ್ಗಾವಣೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದೆ.
ಜಪ್ತಿ ಮಾಡಿದ ಸ್ತಿಗಳಲ್ಲಿ ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ 10 ಲಕ್ಷ ರು. ಮೌಲ್ಯದ ಜಮೀನು ಮತ್ತು ಪಕ್ಷದ ಐದು ‘ರಹಸ್ಯ’ ಬ್ಯಾಂಕ್ ಖಾತೆಗಳಲ್ಲಿ ಇರಿಸಲಾಗಿರುವ 63 ಲಕ್ಷ ರು. ಠೇವಣಿ ಇವೆ.
ಏನಿದು ಹಗರಣ?:
ಕುರುವನ್ನೂರ್ ಸಹಕಾರಿ ಬ್ಯಾಂಕ್‌ನಲ್ಲಿ ಸಿಪಿಎಂ, ತನಗೆ ಬೇಕಾದವರಿಗೆ ಅಕ್ರಮವಾಗಿ ಸಾಲ ಕೊಡಿಸಿದೆ. ಸಾಲ ಕೊಡಿಸಿದ್ದಕ್ಕೆ ಪ್ರತ್ಯುಪಕಾರವಾಗಿ ಸಾಲಗಾರರು ಸಿಪಿಎಂಗೆ ಲಂಚ ನೀಡಿದ್ದಾರೆ. ಈ ಲಂಚದ ಹಣದಿಂದ ತನ್ನ ಪಕ್ಷದ ಕಚೇರಿ ನಿರ್ಮಿಸಲು ಸಿಪಿಎಂ ತ್ರಿಶೂರ್ ಜಿಲ್ಲೆಯಲ್ಲಿ ಜಮೀನು ಖರೀದಿಸಿತ್ತು. ಹೀಗಾಗಿ ಈ ಜಮೀನನ್ನು ಜಪ್ತಿ ಮಾಡಲಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಇ.ಡಿ. ಬಂಧಿಸಿದೆ. ಅವರು ನೀಡಿದ ತಪ್ಪೊಪ್ಪಿಗೆ ಹೇಳಿಕೆ ಆಧರಿಸಿಯು ಕ್ರಮ ಜರುಗಿಸಲಾಗಿದೆ ಎಂದು ಅವು ತಿಳಿಸಿವೆ.
;Resize=(128,128))
;Resize=(128,128))
;Resize=(128,128))
;Resize=(128,128))