ಅಕ್ರಮ ಹಣ ವರ್ಗಾವಣೆ : ಭಂಡಾರಿ ಕೇಸಲ್ಲಿ ವಾದ್ರಾ ವಿರುದ್ಧ ಜಾರ್ಜ್‌ಶೀಟ್‌

| N/A | Published : Nov 21 2025, 01:45 AM IST / Updated: Nov 21 2025, 04:27 AM IST

Robert vadra
ಅಕ್ರಮ ಹಣ ವರ್ಗಾವಣೆ : ಭಂಡಾರಿ ಕೇಸಲ್ಲಿ ವಾದ್ರಾ ವಿರುದ್ಧ ಜಾರ್ಜ್‌ಶೀಟ್‌
Share this Article
  • FB
  • TW
  • Linkdin
  • Email

ಸಾರಾಂಶ

ಬ್ರಿಟನ್‌ಗೆ ಪರಾರಿಯಾಗಿರುವ ಆರ್ಥಿಕ ಅಪರಾಧಿ ಸಂಜಯ್‌ ಭಂಡಾರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ವಿರುದ್ಧ ಜಾರಿ ನಿರ್ದೇಶಾನಲಯ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆ ಮಾಡಿದೆ.

ನವದೆಹಲಿ: ಬ್ರಿಟನ್‌ಗೆ ಪರಾರಿಯಾಗಿರುವ ಆರ್ಥಿಕ ಅಪರಾಧಿ ಸಂಜಯ್‌ ಭಂಡಾರಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್‌ ಸಂಸದೆ ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್‌ ವಾದ್ರಾ ವಿರುದ್ಧ ಜಾರಿ ನಿರ್ದೇಶಾನಲಯ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಕೆ ಮಾಡಿದೆ.

ಭಂಡಾರಿ ವಿರುದ್ಧ ತೆರಿಗೆ ವಂಚನೆ ಪ್ರಕರಣದಲ್ಲಿ ಇ.ಡಿ. ತನಿಖೆ ನಡೆಸುತ್ತಿದ್ದು, ಈ ವೇಳೆಯಲ್ಲಿ ವಾದ್ರಾ ಮತ್ತು ಅವರ ಸಹಚರರೊಂದಿಗೆ ಸಂಜಯ್‌ಗೆ ಸಂಪರ್ಕವಿದೆ ಎಂದು ಬಿಂಬಿಸುವ ಇ ಮೇಲ್‌, ದಾಖಲೆ ಪತ್ತೆಯಾಗಿದೆ. ಜೊತೆಗೆ ಲಂಡನ್‌ನಲ್ಲಿರುವ ಭಂಡಾರಿ ಆಸ್ತಿಯನ್ನು ವಾದ್ರಾ ಸಲಹೆಯಂತೆ ನವೀಕರಣ ಮಾಡಲಾಗಿದೆ. ಈ ಎಲ್ಲಾ ನಂಟಿನ ಆಧಾರದಲ್ಲಿ ಪ್ರಿಯಾಂಕಾ ಪತಿ ವಿರುದ್ಧ ಜಾರ್ಜ್‌ಶೀಟ್‌ ಸಲ್ಲಿಕೆಯಾಗಿದೆ.

ಇದು ವಾದ್ರಾ ಅವರ ವಿರುದ್ಧ ದಾಖಲಾಗಿರುವ ಎರಡನೇಯ ಜಾರ್ಜ್‌ಶೀಟ್‌ ಅಗಿದ್ದು, ಕಳೆದ ಜುಲೈನಲ್ಲಿ ಅವರ ವಿರುದ್ಧ ಹರ್ಯಾಣದ ಶಿಕೋಹ್‌ಪುರದಲ್ಲಿ ಭೂ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಆರೋಪ ಪಟ್ಟಿ ಸಲ್ಲಿಕೆಯಾಗಿತ್ತು.

ಶಿಕ್ಷಕರ ಹಿಂಸೆ: ಮೆಟ್ರೋ ರೈಲು ಹಳಿಗೆ ಹಾರಿ ವಿದ್ಯಾರ್ಥಿ ಸಾವು

ನವದೆಹಲಿ: ಶಾಲೆಯಲ್ಲಿ ಶಿಕ್ಷಕರ ನಿಂದನೆಯಿಂದ ಮನನೊಂದು ಮನನೊಂದು 10ನೇ ತರಗತಿಯ ವಿದ್ಯಾರ್ಥಿಯೋರ್ವ ದೆಹಲಿ ಮೆಟ್ರೋ ನಿಲ್ದಾಣಕ್ಕೆ ತೆರಳಿ ಹಳೆ ಮೇಲೆ ಹಾರಿ ಆತ್ಮ*ತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಶೌರ್ಯ ಪಾಟೀಲ್‌(16) ಆತ್ಮ*ತ್ಯೆ ಮಾಡಿಕೊಂಡ ವಿದ್ಯಾರ್ಥಿ.ಮರಣಪತ್ರದಲ್ಲಿ ‘ಶಿಕ್ಷಕರು ಕೊಡುತ್ತಿದ್ದ ಹಿಂಸೆಯನ್ನು ತಾಳಲಾಗದೆ ಇಂಥಹ ನಿರ್ಧಾರಕ್ಕೆ ಬರಬೇಕಾಯಿತು. ಅಪ್ಪ, ಅಮ್ಮ, ಸಹೋದರ, ಕ್ಷಮಿಸಿ’ ಎಂದು ಬರೆದಿರುವ ಶೌರ್ಯ, ಸೆಂಟ್‌ ಕೊಲಂಬಾ ಶಾಲೆಯ ಶಿಕ್ಷಕರಿಂದ ನನಗಾದಂತೆ ಯಾವ ವಿದ್ಯಾರ್ಥಿಯೂ ಆಗಬಾರದು. ಅದಕ್ಕಾಗಿ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾನೆ. ಇದೇ ಪತ್ರದಲ್ಲಿ, ‘ಸಾವಿನ ಬಳಿಕ ನನ್ನ ಯಾವುದಾದರೂ ಅಂಗ ಸರಿಯಿದ್ದರೆ, ಅವುಗಳ ಅಗತ್ಯವಿದ್ದವರಿಗೆ ದಾನ ಮಾಡಿ’ ಎಂದು ಬರೆದಿದ್ದಾನೆ.

ಈತ 6 ತಿಂಗಳಿಂದ ಶಾಲೆಯಲ್ಲಿ ಹಿಂಸೆ ಅನುಭವಿಸುತ್ತಿದ್ದು, ಗುರುವಾರ ನೃತ್ಯ ಮಾಡುವಾಗ ಬಿದ್ದದ್ದಕ್ಕೆ ಶಿಕ್ಷಕರಿಂದ ಮೂದಿಸಲ್ಪಟ್ಟಿದ್ದ ಎನ್ನಲಾಗಿದೆ.

Read more Articles on