ಸಾರಾಂಶ
ರಾಹುಲ್ ಗಾಂಧಿ ಅವರೊಬ್ಬ ಬ್ರಿಟಿಷ್ ಪ್ರಜೆ’ ಎಂದು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್.ವಿಘ್ನೇಶ್ ಶಿಶಿರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ವಿಚಾರಣೆ ನಡೆಸಿದೆ. ಈ ವೇಳೆ ರಾಹುಲ್‌ರ ವಿದೇಶಿ ವಹಿವಾಟಿನ ಬಗ್ಗೆ ಮಾಹಿತಿ ಪಡೆದಿದೆ.
ನವದೆಹಲಿ: ‘ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಬ್ಬ ಬ್ರಿಟಿಷ್ ಪ್ರಜೆ’ ಎಂದು ಅಲಹಾಬಾದ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕರ್ನಾಟಕ ಬಿಜೆಪಿ ಕಾರ್ಯಕರ್ತ ಎಸ್.ವಿಘ್ನೇಶ್ ಶಿಶಿರ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಮಂಗಳವಾರ ವಿಚಾರಣೆ ನಡೆಸಿದೆ. ಈ ವೇಳೆ ರಾಹುಲ್‌ರ ವಿದೇಶಿ ವಹಿವಾಟಿನ ಬಗ್ಗೆ ಮಾಹಿತಿ ಪಡೆದಿದೆ.
ವಿದೇಶಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಸೆಕ್ಷನ್ 37ರಡಿ ಇ.ಡಿ. ಶಿಶಿರ್ ಅವರನ್ನು ವಿಚಾರಣೆ ನಡೆಸಿತು. ಈ ವೇಳೆ ರಾಹುಲ್ ವಿದೇಶಿ ವಹಿವಾಟಿನ ದಾಖಲೆಗಳನ್ನು ನೀಡುವಂತೆ ಅಧಿಕಾರಿಗಳು ನಿರ್ದೇಶನ ನೀಡಿದ್ದು, ಫೆಮಾ ಅಡಿ ಶಿಶಿರ್ ಹೇಳಿಕೆ ದಾಖಲಿಸಿಕೊಕೊಂಡರು ಎಂದು ಏಜೆನ್ಸಿ ಮೂಲಗಳು ತಿಳಿಸಿವೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಶಿಶಿರ್, ‘ರಾಹುಲ್ ಕುರಿತ ಕೆಲ ಸಾಕ್ಷ್ಯ, ದಾಖಲೆ, ವಿಡಿಯೋಗಳಿವೆ’ ಎಂದು ಹೇಳಿಕೊಂಡಿದ್ದಾರೆ.
ಈ ಮುನ್ನ ಅಲಹಾಬಾದ್ ಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್‌ನಲ್ಲಿ ಶಿಶಿರ್ ಅವರು, ‘ರಾಹುಲ್ ಗಾಂಧಿ ಬ್ರಿಟಿಷ್ ನಾಗರಿಕ ಎಂಬುದಕ್ಕೆ ನನ್ನ ಬಳಿಕ ದಾಖಲೆಗಳಿವೆ. ಬ್ರಿಟನ್ ಸರ್ಕಾರದ ಇಮೇಲ್‌ಗಳು ಗಾಂಧಿ ಅವರು ಬ್ರಿಟಿಷ್ ಪ್ರಜೆ ಎಂಬುದನ್ನು ಸಾಬೀತುಪಡಿಸುತ್ತವೆ. ಈ ಕಾರಣಕ್ಕೆ ಅವರು ಭಾರತದಲ್ಲಿ ಚುನಾವಣೆ ಎದುರಿಸಲು ಅನರ್ಹರು’ ಎಂದು ಆರೋಪಿಸಿದ್ದರು. ಇದನ್ನು ಆಧರಿಸಿ, ಇ.ಡಿ. ರಾಹುಲ್‌ರ ವಿದೇಶಿ ವಹಿವಾಟು ಮಾಹಿತಿ ಸಂಗ್ರಹಕ್ಕೆ ಮುಂದಾಗಿದೆ.