ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕ ಮಕರಜ್ಯೋತಿಯು ಬುಧವಾರ ದರ್ಶನವಾಗಲಿದೆ. ಈ ಬಾರಿ ಸಂಕ್ರಾಂತಿಯು 14ರ ಮಧ್ಯಾಹ್ನದಿಂದಲೇ ಆರಂಭವಾಗುವ ಕಾರಣ 14ರ ಸಂಜೆ ಪೊನ್ನಂಬಲಮೇಡು ಪರ್ವತದ ಮೇಲೆ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.

ಪಟ್ಟಣಂತಿಟ್ಟ: ಶಬರಿಮಲೆಯ ಅಯ್ಯಪ್ಪಸ್ವಾಮಿ ದೇಗುಲದ ವಾರ್ಷಿಕ ಮಕರಜ್ಯೋತಿಯು ಬುಧವಾರ ದರ್ಶನವಾಗಲಿದೆ. ಈ ಬಾರಿ ಸಂಕ್ರಾಂತಿಯು 14ರ ಮಧ್ಯಾಹ್ನದಿಂದಲೇ ಆರಂಭವಾಗುವ ಕಾರಣ 14ರ ಸಂಜೆ ಪೊನ್ನಂಬಲಮೇಡು ಪರ್ವತದ ಮೇಲೆ ಮಕರಜ್ಯೋತಿ ಕಾಣಿಸಿಕೊಳ್ಳಲಿದೆ.

ಭಕ್ತರ ಸಂಖ್ಯೆಗೆ ಈ ಬಾರಿ ಮಿತಿ ಹೇರಲಾಗಿದ್ದು, 30,000 ಆನ್ಲೈನ್‌ ಮತ್ತು 5000 ಕೌಂಟರ್‌ ಟಿಕೆಟ್‌ ಹೊಂದಿರುವವರಿಗೆ ಮಾತ್ರವೇ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಭಕ್ತರ ಭದ್ರತೆಗಾಗಿ 2000 ಪೊಲೀಸ್‌ ಸಿಬ್ಬಂದಿ ನಿಯೋಜಿಸಲಾಗಿದ್ದು, ಇವರೊಂದಿಗೆ 136 ಸ್ವಯಂಸೇವಕರು, 31 ತುರ್ತು ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಟಿಡಿಬಿ ಅಧಿಕಾರಿಗಳು ತಿಳಿಸಿದ್ದಾರೆ.