ಸಾರಾಂಶ
ಏ.19ರಂದು ಚುನಾವಣೆ, ಮೇ 22ಕ್ಕೆ ಮತ ಎಣಿಕೆ ಎಂಬ ಸಂದೇಶ ಸುಳ್ಳಾಗಿದ್ದು, ಲೋಕಸಭಾ ಚುನಾವಣೆಯ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ ಎಂಬುದಾಗಿ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ನವದೆಹಲಿ: ಲೋಕಸಭೆ ಚುನಾವಣೆ ನಡೆಯುವ ದಿನಾಂಕದ ಬಗ್ಗೆ ವಾಟ್ಸಾಪ್‌ನಲ್ಲಿ ಕಳೆದ 2 ದಿನದಿಂದ ಹರಿದಾಡುತ್ತಿರುವ ಸಂದೇಶ ಸುಳ್ಳು ಭಾರತೀಯ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಲೋಕಸಭೆ ಚುನಾವಣೆಯು ಏ.19 ರಂದು ನಡೆಯಲಿದ್ದು ಮೇ 22 ರಂದು ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ ಎಂದು ವಾಟ್ಸಾಪ್ ಸಂದೇಶ ಹರಿದಾಡುತ್ತಿತ್ತು. ಇದು ನಕಲಿ ಸುದ್ದಿ ಎಂದು ಆಯೋಗ ಸ್ಪಷ್ಟಪಡಿಸಿದೆ.
‘2024ರ ಲೋಕಸಭೆ ಚುನಾವಣೆ ವೇಳಾಪಟ್ಟಿ ಬಗ್ಗೆ ವಾಟ್ಸಪ್‌ನಲ್ಲಿ ನಕಲಿ ಸಂದೇಶವೊಂದು ಹರಿದಾಡುತ್ತಿದೆ.
ಆದರೆ ಇದೊಂದು ವದಂತಿ. ಆಯೋಗದಿಂದ ಇದುವರೆಗೂ ಚುನಾವಣೆ ನಡೆಯುವ ಯಾವುದೇ ದಿನಾಂಕ ಪ್ರಕಟಿಸಿಲ್ಲ.
ಅಧಿಕೃತ ಸುದ್ದಿಗೋಷ್ಠಿ ಮೂಲಕ ಲೋಕಸಭೆ ಚುನಾವಣೆ ವೇಳಾಪಟ್ಟಿ ಬಗ್ಗೆ ಘೋಷಿಸಲಾಗುವುದು’ ಎಂದು ಆಯೋಗ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.