ಜಾತಿ, ಧರ್ಮ ಭಾಷೆ ಹೆಸರಲ್ಲಿ ಮತ ಕೇಳಬೇಡಿ: ಚು.ಆಯೋಗ

| Published : Mar 02 2024, 01:50 AM IST / Updated: Mar 02 2024, 11:44 AM IST

ಸಾರಾಂಶ

ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಸದಂತೆ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಸೂಚನೆ ನೀಡಿದೆ.

ನವದೆಹಲಿ: ಲೋಕಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ಚುನಾವಣಾ ಆಯೋಗವು ಜಾತಿ-ಧರ್ಮ ಮತ್ತು ಭಾಷಾ ಆಧಾರದಲ್ಲಿ ಮತಯಾಚನೆ ಮಾಡದಂತೆ ಅಭ್ಯರ್ಥಿಗಳು ಮತ್ತು ಪಕ್ಷದ ತಾರಾ ಪ್ರಚಾರಕರಿಗೆ ಸೂಚಿಸಿದೆ.

ಪ್ರಮುಖವಾಗಿ ಚುನಾವಣಾ ಪ್ರಚಾರಕ್ಕೆ ಧಾರ್ಮಿಕ ಸ್ಥಳಗಳನ್ನು ಬಳಕೆ ಮಾಡಿಕೊಳ್ಳಬಾರದು. ಜೊತೆಗೆ ದೇವರು ಮತ್ತು ಭಕ್ತರ ಭಾವನೆಗೆ ಧಕ್ಕೆ ಬರುವ ರೀತಿಯಲ್ಲಿ ಯಾವುದೇ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ದೇಶಿಸಿದೆ. 

ಅಲ್ಲದೆ ಆಧಾರರಹಿತವಾಗಿ ಚುನಾವಣಾ ಪ್ರಚಾರದ ವೇಳೆ ಯಾವುದೇ ಆರೋಪಗಳನ್ನು ಮಾಡದಂತೆ ಸೂಚಿಸಿದೆ.