ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬಳಿಕ ಅವರ ಟ್ರಂಪ್‌ ಆಡಳಿತದಲ್ಲಿ ಸರ್ಕಾರದ ದಕ್ಷತೆಯ ಇಲಾಖೆ(ಡೋಜ್‌) ಇಲಾಖೆಯ ಮುಖ್ಯಸ್ಥರ ಹುದ್ದೆ ವಹಿಸಿಕೊಂಡಿದ್ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್‌ ಇದೀಗ ಆ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ.

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್‌ ಟ್ರಂಪ್ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿ ಬಳಿಕ ಅವರ ಟ್ರಂಪ್‌ ಆಡಳಿತದಲ್ಲಿ ಸರ್ಕಾರದ ದಕ್ಷತೆಯ ಇಲಾಖೆ(ಡೋಜ್‌) ಇಲಾಖೆಯ ಮುಖ್ಯಸ್ಥರ ಹುದ್ದೆ ವಹಿಸಿಕೊಂಡಿದ್ ವಿಶ್ವದ ನಂ.1 ಶ್ರೀಮಂತ ಎಲಾನ್ ಮಸ್ಕ್‌ ಇದೀಗ ಆ ಹುದ್ದೆಗೆ ಗುಡ್‌ಬೈ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಸ್ಕ್‌ ‘ವಿಶೇಷ ಸರ್ಕಾರಿ ನೌಕರನಾಗಿ ನನ್ನ ಸಮಯ ಮುಗಿಯುತ್ತಿದ್ದು, ನಿರರ್ಥಕ ಖರ್ಚನ್ನು ಕಡಿಮೆ ಮಾಡುವ ಜವಾಬ್ದಾರಿಯನ್ನು ನನಗೆ ವಹಿಸಿದ್ದ ಅಧ್ಯಕ್ಷ ಟ್ರಂಪ್‌ ಅವರಿಗೆ ಧನ್ಯವಾದ’ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಸ್ಕ್‌ ತಮ್ಮ ಉದ್ಯಮದತ್ತ ಗಮನ ಹರಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಅಸಮಾಧಾನದ ಬೆನ್ನಲ್ಲೇ ನಿರ್ಗಮನ:

ಅಧ್ಯಕ್ಷ ಟ್ರಂಪ್‌ ಘೋಷಿಸಿದ್ದ, ತೆರಿಗೆ ಕಡಿತ, ವಲಸೆ ನೀತಿಯನ್ನು ಮತ್ತಷ್ಟು ಕಠಿಣಗೊಳಿಸುವ ‘ಬಿಗ್‌ ಬ್ಯೂಟಿಫುಲ್‌ ಬಿಲ್‌’ ಅನ್ನು ಭಾರೀ ಖರ್ಚಿನ ಬಿಲ್‌ ಎಂದಿದ್ದ ಮಸ್ಕ್‌, ‘ಇದು ಒಂದೋ ಬಿಗ್‌(ದೊಡ್ಡದು) ಆಗಿರಬಹುದು ಇಲ್ಲವೇ ಬ್ಯೂಟಿಫುಲ್‌(ಸುಂದರ) ಆಗಿರಬಹುದು. ಅದರ ಕೆಲವೊಂದು ಅಂಶಗಳಿಂದ ನನಗೆ ತೃಪ್ತಿಯಾಗಿಲ್ಲ’ ಎಂದಿದ್ದರು. ಇದಾದ 1 ದಿನದ ಬಳಿಕ ಮಸ್ಕ್‌ ಸರ್ಕಾರದಿಂದಲೇ ಹೊರಬಂದಿದ್ದಾರೆ.