ಸಾರಾಂಶ
ಜಾಗತಿಕ ಟಾಪ್ 10 ಶ್ರೀಮಂತರಲ್ಲಿ ಎಕ್ಸ್ ಕಂಪನಿಯ ಮಾಲೀಕ ಎಲಾನ್ ಮಸ್ಕ್‌ಗೇ ನಷ್ಟ ಅತಿ ಹೆಚ್ಚು ಉಂಟಾಗಿದ್ದು, ಒಂದು ವಾರ್ಷಿಕ ಸಾಲಿನಲ್ಲಿ 40 ಬಿಲಿಯನ್ ಡಾಲರ್ ಸಂಪತ್ತು ಕರಗಿದೆ ಎಂಬುದಾಗಿ ಬ್ಲೂಂಬರ್ಗ್ ವರದಿ ಮಾಡಿದೆ.
ವಾಷಿಂಗ್ಟನ್: ಖ್ಯಾತ ಸಾಮಾಜಿಕ ಜಾಲತಾಣವಾಗಿರುವ ಎಕ್ಸ್ ಮಾಲೀಕ ಹಾಗೂ ಟೆಸ್ಲದ ಎಲಾನ್ ಮಸ್ಕ್ ಅವರ ಸಂಪತ್ತು ಪ್ರಸಕ್ತ ಸಾಲಿನಲ್ಲಿ ಬರೋಬ್ಬರಿ 34 ಸಾವಿರ ಕೋಟಿ ರು.(40 ಬಿಲಿಯನ್ ಡಾಲರ್) ಕುಸಿತ ಕಂಡಿರುವುದಾಗಿ ಬ್ಲೂಂಬರ್ಗ್ ಬಿಲಿಯನೇರ್ ವರದಿಯಲ್ಲಿ ಉಲ್ಲೇಖಿಸಿದೆ.
ಇದು ಈ ಸಾಲಿನಲ್ಲಿ ಟಾಪ್ 10 ಧನಿಕರೊಬ್ಬರು ಕಳೆದಕೊಂಡಿರುವ ಅತಿ ಹೆಚ್ಚಿನ ಸಂಪತ್ತು ಪ್ರಮಾಣವಾಗಿದೆ.ಇದರೊಂದಿಗೆ ಎಲಾನ್ ಮಸ್ಕ್ ಒಟ್ಟು ಸಂಪತ್ತು 16,06,500 ಕೋಟಿ ರು.ಗೆ (189 ಬಿಲಿಯನ್ ಡಾಲರ್) ಕುಸಿತಗೊಂಡು ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಾರಿದ್ದಾರೆ. ಮೊದಲ ಸ್ಥಾನದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಸಂಸ್ಥೆಯ ಮಾಲೀಕ ಲೂಯಿಸ್ ವಿಟ್ಟನ್ (17 ಲಕ್ಷ ಕೋಟಿ ರು.) ಇದ್ದು, ಎರಡನೇ ಸ್ಥಾನದಲ್ಲಿ ಅಮೆಜಾನ್ ಸ್ಥಾಪಕ ಜೆಫ್ ಬಿಜೋಸ್ ಇದ್ದಾರೆ.