ಎಸ್‌ಬಿಐ ಸಾಲದ ಬಡ್ಡಿದರ ಶೇ.0.1ರಷ್ಟು ಹೆಚ್ಚಳ

| Published : Jun 16 2024, 01:49 AM IST / Updated: Jun 16 2024, 04:14 AM IST

ಸಾರಾಂಶ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಎನ್ನಿಸಿಕೊಂಡ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ), ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.0.1ರಷ್ಟು ಏರಿಸಿದೆ.

ಮುಂಬೈ: ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಎನ್ನಿಸಿಕೊಂಡ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (ಎಸ್‌ಬಿಐ), ವಿವಿಧ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ.0.1ರಷ್ಟು ಏರಿಸಿದೆ.

ಇದರಿಂದಾಗಿ ಗೃಹ, ವಾಣಿಜ್ಯ ಸಾಲದ ಮೇಲಿನ ಇಎಂಐ ಕಂತು ಪ್ರಮಾಣ ಕೊಂಚ ಏರಿಕೆ ಆಗಲಿದೆ. ಜೂನ್‌ 15ರಿಂದ ಇದು ಜಾರಿಗೆ ಬರಲಿದೆ. 1 ವರ್ಷದ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರ ಶೇ.8.65ರಿಂದ ಶೇ.8.75ಕ್ಕೆ, 2 ವರಕ್ಕೆ ಶೇ.8.75ರಿಂದ ಶೇ.8.85ಕ್ಕೆ ಹಾಗೂ 3 ವರ್ಷಕ್ಕೆ ಶೇ.8.85ರಿಂದ ಶೇ.8.95ಕ್ಕೆ ಹೆಚ್ಚಲಿದೆ. 1 ತಿಂಗಳ ಬಡ್ಡಿ ದರ ಶೇ.8.20 ಇದ್ದಿದ್ದು ಶೇ.8.30ಕ್ಕೆ ಏರಿಲಿದೆ.