ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್‌ ರನ್‌ : ಪಂತ್‌ ಹೊಸ ದಾಖಲೆ!

| N/A | Published : Jul 24 2025, 01:45 AM IST / Updated: Jul 24 2025, 04:15 AM IST

ಸಾರಾಂಶ

ಇಂಗ್ಲೆಂಡ್‌ ನೆಲದಲ್ಲಿ 1000 ಟೆಸ್ಟ್‌ ರನ್‌ ಪೂರೈಸಿದ ಮೊದಲ ಪ್ರವಾಸಿ ವಿಕೆಟ್‌ ಕೀಪರ್‌ ಎನ್ನುವ ದಾಖಲೆಯನ್ನು ರಿಷಭ್‌ ಪಂತ್‌ ಬರೆದಿದ್ದಾರೆ.

ಇಂಗ್ಲೆಂಡ್‌ ನೆಲದಲ್ಲಿ 1000 ಟೆಸ್ಟ್‌ ರನ್‌ ಪೂರೈಸಿದ ಮೊದಲ ಪ್ರವಾಸಿ ವಿಕೆಟ್‌ ಕೀಪರ್‌ ಎನ್ನುವ ದಾಖಲೆಯನ್ನು ರಿಷಭ್‌ ಪಂತ್‌ ಬರೆದಿದ್ದಾರೆ. ಮ್ಯಾಂಚೆಸ್ಟರ್‌ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಪಂತ್‌ ಈ ಮೈಲುಗಲ್ಲು ತಲುಪಿದರು. ಇಂಗ್ಲೆಂಡ್‌ನಲ್ಲಿ ಧೋನಿ 778, ಆಸ್ಟ್ರೇಲಿಯಾದ ರಾಡ್‌ ಮಾರ್ಷ್‌ 773, ದ.ಆಫ್ರಿಕಾದ ಜಾನ್‌ ವೇಟ್‌ 684, ಆಸ್ಟ್ರೇಲಿಯಾದ ಇಯಾನ್‌ ಹೀಲಿ 624 ರನ್‌ ಗಳಿಸಿದ್ದಾರೆ 

89 ಸಿಕ್ಸರ್‌: ರೋಹಿತ್‌

ದಾಖಲೆ ಮುರಿದ ಪಂತ್‌

ಭಾರತ ಪರ ಟೆಸ್ಟ್‌ನಲ್ಲಿ ಅತಿಹೆಚ್ಚು ಸಿಕ್ಸರ್‌ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಪಂತ್‌, ರೋಹಿತ್‌ ಶರ್ಮಾರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ. ಪಂತ್‌ 89 ಸಿಕ್ಸರ್‌ ಬಾರಿಸಿದ್ದು, 88 ಸಿಕ್ಸರ್‌ ಬಾರಿಸಿರುವ ರೋಹಿತ್‌ರನ್ನು ಹಿಂದಿಕ್ಕಿದ್ದಾರೆ. ವೀರೇಂದ್ರ ಸೆಹ್ವಾಗ್‌ 90 ಸಿಕ್ಸರ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.

 14ನೇ ಟಾಸ್‌ ಸೋಲು

ಭಾರತ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸತತ 14 ಪಂದ್ಯಗಳಲ್ಲಿ ಟಾಸ್‌ ಸೋತಿದೆ. ಇದೊಂದು ವಿಶ್ವ ದಾಖಲೆ. ವಿಂಡೀಸ್‌ ಸತತ 12 ಟಾಸ್‌ ಸೋತಿತ್ತು. 311ನೇ ಆಟಗಾರ

ಹರ್ಯಾಣದ ವೇಗಿ ಅನ್ಶುಲ್‌ ಕಾಂಬೋಜ್‌ ಭಾರತ ಟೆಸ್ಟ್‌ ತಂಡಕ್ಕೆ ಪಾದಾರ್ಪಣೆ ಮಾಡಿದ 311ನೇ ಆಟಗಾರ.

Read more Articles on