ಎವೆರೆಸ್ಟ್‌ ಫಿಶ್‌ ಮಸಾಲೆಯಲ್ಲಿ ಕೀಟನಾಶಕ: ಹಿಂಪಡೆಯಲು ಸಿಂಗಾಪುರ ಸರ್ಕಾರ ಆದೇಶ

| Published : Apr 21 2024, 02:25 AM IST / Updated: Apr 21 2024, 07:45 AM IST

ಎವೆರೆಸ್ಟ್‌ ಫಿಶ್‌ ಮಸಾಲೆಯಲ್ಲಿ ಕೀಟನಾಶಕ: ಹಿಂಪಡೆಯಲು ಸಿಂಗಾಪುರ ಸರ್ಕಾರ ಆದೇಶ
Share this Article
  • FB
  • TW
  • Linkdin
  • Email

ಸಾರಾಂಶ

ಫಿಶ್‌ ಕರಿ ಮಸಾಲೆಯಲ್ಲಿ ಕ್ಯಾನ್ಸರ್‌ ಎಥೆಲಿನ್‌ ಆಕ್ಸೈಡ್‌ ಪತ್ತೆ ಹಿನ್ನೆಲೆಯಲ್ಲಿ ಅದರ ಮಾರಾಟವನ್ನು ನಿಲ್ಲಿಸುವಂತೆ ಸಿಂಗಾಪುರ ಸರ್ಕಾರ ಆದೇಶಿಸಿದೆ.

ಸಿಂಗಾಪುರ: ಭಾರತದ ಅಗ್ರ ಮಸಾಲೆ ಪದಾರ್ಥ ತಯಾರಕ ಕಂಪನಿಗಳಲ್ಲಿ ಒಂದಾದ ಎವರೆಸ್ಟ್‌ ಕಂಪನಿಯ ಫಿಶ್‌ ಮಸಾಲೆಯಲ್ಲಿ ಕೀಟನಾಶಕ ಅಂಶ (ಎಥೆಲಿನ್‌ ಆಕ್ಸೈಡ್‌) ಪತ್ತೆಯಾಗಿರುವ ಕಾರಣ ಪದಾರ್ಥಗಳನ್ನು ಕೂಡಲೇ ಹಿಂಪಡೆದುಕೊಳ್ಳಲು ಸಿಂಗಾಪುರ ಆಹಾರ ನಿಗಮ ಆದೇಶಿಸಿದೆ. ಹಾಂಗ್‌ಕಾಂಗ್‌ ದೇಶವೂ ಸಹ ಹಿಂಪಡೆದುಕೊಳ್ಳಲು ಸೂಚನೆ ನೀಡಿದೆ.

ಎವರೆಸ್ಟ್‌ ಕಂಪನಿಯ ಫಿಶ್‌ ಕರಿ ಮಸಾಲೆ ಪರೀಕ್ಷಿಸಿದಾಗ ಅದರಲ್ಲಿ ಗ್ರೂಪ್‌ ಮೊದಲ ಹಂತದ ಕ್ಯಾನ್ಸರ್‌ ಕಾರಕ (ಕಾರ್ಸಿನೋಜಿನ್‌) ಅಂಶ ಪತ್ತೆಯಾಗಿದೆ. 

ಈ ನಿಟ್ಟಿನಲ್ಲಿ ಸುರಕ್ಷತಾ ದೃಷ್ಟಿಯಿಂದ ಕ್ರಮ ತೆಗೆದುಕೊಂಡಿದೆ.

ಹಾಂಗ್‌ಕಾಂಗ್‌ನಲ್ಲಿಯೂ ಕ್ಯಾನ್ಸರ್‌ ಕಾರಕ ಪತ್ತೆ:ಕೇವಲ ಸಿಂಗಾಪುರವಲ್ಲದೇ ಹಾಂಗ್‌ಕಾಂಗ್‌ ದೇಶ ಮಸಾಲೆ ಪದಾರ್ಥಗಳನ್ನು ಪರೀಕ್ಷಿಸಿ ಏಪ್ರಿಲ್‌ ಶುರುವಿನಲ್ಲಿಯೇ ಪರೀಕ್ಷೆ ನಡೆಸಿತ್ತು. ಈ ವೇಳೆ ಎವರೆಸ್ಟ್‌ನ ಫಿಶ್‌ ಕರಿ ಮಸಾಲೆ, ಎಂಡಿಎಚ್‌, ಸಾಂಬಾರ್‌ ಮಸಾಲೆ ಪುಡಿ ಹಾಗೂ ಕರಿ ಪೌಡರ್‌ ಮಿಕ್ಸ್‌ ಮಸಾಲೆಗಳಲ್ಲಿ ಕ್ಯಾನ್ಸರ್‌ ಕಾರಕ ಪತ್ತೆಯಾಗಿತ್ತು. ಹಾಗಾಗಿ ಏ.5ರಂದೇ ಹಿಂಪಡೆದುಕೊಳ್ಳಲು ಆದೇಶಿಸಿತ್ತು.