ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಎ.ಕ್ಯು. ಖಾನ್‌ ಮಹಾ ದ್ರೋಹಿ

| N/A | Published : Nov 25 2025, 01:15 AM IST / Updated: Nov 25 2025, 04:49 AM IST

AQ Khan
ಪಾಕಿಸ್ತಾನ ಅಣ್ವಸ್ತ್ರ ಪಿತಾಮಹ ಎ.ಕ್ಯು. ಖಾನ್‌ ಮಹಾ ದ್ರೋಹಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕಿಸ್ತಾನದ ಖ್ಯಾತ ಅಣು ವಿಜ್ಞಾನಿ ಎ.ಕ್ಯು.ಖಾನ್‌ ಅಣ್ವಸ್ತ್ರ ತಂತ್ರಜ್ಞಾನವನ್ನು ಕಳ್ಳಮಾರ್ಗದಲ್ಲಿ ಪಡೆಯುತ್ತಿದ್ದುದು ಅಷ್ಟೇ ಅಲ್ಲ, ಸ್ವತ ಇಂಥ ತಂತ್ರಜ್ಞಾನಗಳ ಮಾರಾಟ ಮಾಡುವ ನೆಟ್‌ವರ್ಕ್‌ವೊಂದನ್ನೂ ನಡೆಸುತ್ತಿದ್ದ. ಪಾಕಿಸ್ತಾನದ ಕೆಲ ಸೇನಾಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಹಣ ನೀಡುತ್ತಿದ್ದ  

ವಾಷಿಂಗ್ಟನ್‌: ಪಾಕಿಸ್ತಾನದ ಖ್ಯಾತ ಅಣು ವಿಜ್ಞಾನಿ ಎ.ಕ್ಯು.ಖಾನ್‌ ಅಣ್ವಸ್ತ್ರ ತಂತ್ರಜ್ಞಾನವನ್ನು ಕಳ್ಳಮಾರ್ಗದಲ್ಲಿ ಪಡೆಯುತ್ತಿದ್ದುದು ಅಷ್ಟೇ ಅಲ್ಲ, ಸ್ವತ ಇಂಥ ತಂತ್ರಜ್ಞಾನಗಳ ಮಾರಾಟ ಮಾಡುವ ನೆಟ್‌ವರ್ಕ್‌ವೊಂದನ್ನೂ ನಡೆಸುತ್ತಿದ್ದ. ತನ್ನ ಗುರಿ ಸಾಧನೆಗೆ ಅನುಕೂಲವಾಗುವಂತೆ ಪಾಕಿಸ್ತಾನದ ಕೆಲ ಸೇನಾಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನಿರಂತರ ಹಣ ನೀಡುತ್ತಿದ್ದ ಎಂಬ ವಿಚಾರವೂ ಇದೀಗ ಬಯಲಾಗಿದೆ.

ಅಮರಿಕದ ಗುಪ್ತಚರ ಸಂಸ್ಥೆ ಸಿಐಎ ಮಾಜಿ ಗುಪ್ತಚರ ಅಧಿಕಾರಿ ಬಹಿರಂಗ

ಅಮರಿಕದ ಗುಪ್ತಚರ ಸಂಸ್ಥೆ ಸಿಐಎ ಯಲ್ಲಿ ಮ್ಯಾಡ್‌ ಡಾಗ್ ಎಂದೇ ಖ್ಯಾತಿಗಳಿಸಿರುವ ಮಾಜಿ ಗುಪ್ತಚರ ಅಧಿಕಾರಿ ಜೇಮ್ಸ್‌ ಲಾವ್ಲರ್‌ ಇಂಥದ್ದೊಂದು ಆಘಾತಕಾರಿ ವಿಚಾರ ಇದೀಗ ಬಹಿರಂಗಪಡಿಸಿದ್ದಾರೆ. ಇದೇ ಕಾರಣಕ್ಕೆ ಲಾವ್ಲರ್‌ ಅವರು ಎ.ಕ್ಯು.ಖಾನ್‌ನನ್ನು ‘ಸಾವಿನ ವ್ಯಾಪಾರಿ’ ಎಂದೇ ಕರೆದಿದ್ದಾರೆ.

ಪಾಕ್‌ ಅಣು ಯೋಜನೆಯ ಹಿಂದೆ ಖಾನ್‌ ಪಾತ್ರದ ಕುರಿತು ಅಮೆರಿಕ ಮೊದಲಿನಿಂದಲೂ ಕಣ್ಣಿಟ್ಟಿತ್ತು. ಆ ಬಳಿಕವೇ ಖಾನ್‌ ಅಣ್ವಸ್ತ್ರ ತಂತ್ರಜ್ಞಾನ ಕಳ್ಳಸಾಗಣೆ ಜಾಲದ ಉದ್ದ-ಅಗಲ ಅರಿವಾಗಿದ್ದು. ಆತ ಅಣುತಂತ್ರಜ್ಞಾನವನ್ನು ಇತರರಿಗೆ ಮಾರಾಟ ಮಾಡುವ ಏಜೆಂಟ್‌ ರೀತಿ ಕೆಲಸ ಮಾಡುತ್ತಿದ್ದ. ಎ.ಕ್ಯು.ಖಾನ್‌ ನೆಟ್‌ವರ್ಕ್‌ ಮೊದಲಿಗೆ ಅಣುತಂತ್ರಜ್ಞಾನವನ್ನು ಕಳ್ಳಸಾಗಣೆ ಮೂಲಕ ಪಡೆಯುತ್ತಿತ್ತು. ಬಳಿಕ ಆ ನೆಟ್‌ವರ್ಕ್‌ ಪೂರ್ಣ ಪ್ರಮಾಣದಲ್ಲಿ ಅಣು ತಂತ್ರಜ್ಞಾನವನ್ನು ಇತರೆ ದೇಶಗಳಿಗೆ ಪೂರೈಸುವ ನೆಟ್‌ವರ್ಕ್‌ ಆಗಿ ಪರಿವರ್ತನೆಯಾಯಿತು.

ಇರಾನ್‌ನ ಅಣು ಯೋಜನೆಗಳಿಗೂ ಎ.ಕ್ಯು.ಖ್ಯಾನ್‌ ಕದ್ದ ತಂತ್ರಜ್ಞಾನ

ಇರಾನ್‌ನ ಅಣು ಯೋಜನೆಗಳಿಗೂ ಎ.ಕ್ಯು.ಖ್ಯಾನ್‌ ಕದ್ದ ತಂತ್ರಜ್ಞಾನ ಪೂರೈಸಿದ್ದ. ಖಾನ್‌ನ ನೆಟ್‌ವರ್ಕ್‌ ಬ್ಯಾಲಿಸ್ಟಿಕ್‌ ಕ್ಷಿಪಣಿ ತಂತ್ರಜ್ಞಾನ ಮತ್ತು ಚೀನಾ ಅಟೋಮಿಕ್‌ ಬಾಂಬ್‌ ಬ್ಲೂಪ್ರಿಂಟ್‌ ಅನ್ನೂ ಇರಾನ್‌ಗೆ ಪೂರೈಸಿತ್ತು ಎಂದು ಲಾವ್ಲರ್‌ ಹೇಳಿದ್ದಾರೆ.

ಇರಾನ್‌ನ ಅಣು ಯೋಜನೆಯನ್ನು ವಿರೋಧಿಸಿದ ಅಮೆರಿಕ ಪಾಕಿಸ್ತಾನದ ಅಣ್ವಸ್ತ್ರ ಯೋಜನೆ ಕುರಿತು ಯಾಕೆ ಮೌನವಾಗಿತ್ತು ಎಂಬ ಪ್ರಶ್ನೆಗೆ, ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನದ ಪಾತ್ರದ ಹಿನ್ನೆಲೆಯಲ್ಲಿ ಕಣ್ಣಿದ್ದರೂ ಅಧಿಕಾರಿಗಳು ಕುರುಡರಂತಿದ್ದರು. ಇಂಥ ಕೆಲ ನಿರ್ಧಾರಗಳು ದೂರಗಾಮಿ ಪರಿಣಾಮ ಬೀರಿದೆ ಎಂದು ಲಾವ್ಲೆಲ್‌ ಒಪ್ಪಿಕೊಂಡಿದ್ದಾರೆ.

Read more Articles on