ಸಲ್ಮಾನ್‌ಗೆ ಉಗ್ರ ಪಟ್ಟ ಕಟ್ಟಿದ ಪಾಕಿಸ್ತಾನ?

| N/A | Published : Oct 27 2025, 12:45 AM IST / Updated: Oct 27 2025, 06:24 AM IST

 Salman Khan a Terrorist for Calling Balochistan a Separate Nation

ಸಾರಾಂಶ

ಪಾಕಿಸ್ತಾನ ಮತ್ತು ಬಲೂಚಿಸ್ತಾನ ಪ್ರತ್ಯೇಕ ದೇಶಗಳು ಎಂಬ ಅರ್ಥದಲ್ಲಿ ಇತ್ತೀಚೆಗೆ ದುಬೈನಲ್ಲಿ ಹೇಳಿಕೆ ನೀಡಿದ್ದ ನಟ ಸಲ್ಮಾನ್‌ ಖಾನ್‌ರನ್ನು ಪಾಕಿಸ್ತಾನ ಸರ್ಕಾರ, ಉಗ್ರರ ನಿಗಾ ಪಟ್ಟಿಗೆ ಸೇರಿಸಿದೆ ಎಂದು ವರದಿಗಳು ಹೇಳಿವೆ.   

ಮುಂಬೈ: ಪಾಕಿಸ್ತಾನ ಮತ್ತು ಬಲೂಚಿಸ್ತಾನ ಪ್ರತ್ಯೇಕ ದೇಶಗಳು ಎಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದ ನಟ ಸಲ್ಮಾನ್‌ ಖಾನ್‌ರನ್ನು ಪಾಕಿಸ್ತಾನ ಸರ್ಕಾರ, ಉಗ್ರರ ನಿಗಾ ಪಟ್ಟಿಗೆ ಸೇರಿಸಿದೆ ಎಂದು ವರದಿಗಳು ಹೇಳಿವೆ.

ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಲ್ಮಾನ್‌,

ಇತ್ತೀಚೆಗೆ ದುಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಸಲ್ಮಾನ್‌, ‘ಹಿಂದಿ ಹಾಗೂ ದಕ್ಷಿಣ ಭಾರತದ ವಿವಿಧ ಭಾಷೆಗಳ ಸಿನಿಮಾ ಇಲ್ಲಿ ಸೂಪರ್‌ಹಿಟ್‌ ಆಗುತ್ತದೆ. ಕಾರಣ, ಇಲ್ಲಿ ಬಲೂಚಿಸ್ತಾನ, ಪಾಕಿಸ್ತಾನ ಮ್ತತು ಅಫ್ಘಾನಿಸ್ತಾನದ ಜನರಿದ್ದಾರೆ’ ಎಂದಿದ್ದರು. ಇದನ್ನು ಬಲೂಚ್‌ ಪ್ರತ್ಯೇಕತಾವಾದಿಗಳು ಸ್ವಾಗತಿಸಿ, ‘ಹಲವು ರಾಷ್ಟ್ರಗಳು ಮಾಡದ ಕೆಲಸವನ್ನು ಅವರ ಮಾಡಿದ್ದಾರೆ’ ಎಂದು ಶ್ಲಾಘಿಸಿತ್ತು. ಇದಕ್ಕೆ ಭಾರತೀಯರೂ ಬೆಂಬಲ ನೀಡಿದ್ದರು.

ಪಾಕ್‌ನಲ್ಲಿ ಅನುದಿನ ವಿಧ್ವಂಸ ಸೃಷ್ಟಿ

ಪಾಕಿಸ್ತಾನದಿಂದ ಬಲೂಚ್‌ ಪ್ರದೇಶವನ್ನು ಪ್ರತ್ಯೇಕ ದೇಶವಾಗಿಸಲು ಪ್ರತ್ಯೇಕತಾವಾದಿಗಳು ಯತ್ನಿಸುತ್ತಿರುವ ಹಾಗೂ ಅದಕ್ಕಾಗಿ ಪಾಕ್‌ನಲ್ಲಿ ಅನುದಿನ ವಿಧ್ವಂಸ ಸೃಷ್ಟಿಸುತ್ತಿರುವ ಹೊತ್ತಿನಲ್ಲೇ ಸಲ್ಮಾನ್‌ ನೀಡಿದ್ದ ಹೇಳಿಕೆ ಪಾಕ್‌ ಅಧಿಕಾರಿಗಳನ್ನು ಕೆರಳಿಸಿತ್ತು. ಪರಿಣಾಮವಾಗಿ ಅವರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆಯ 4ನೇ ಪರಿಚ್ಛೇದದ ಅಡಿಯಲ್ಲಿ ಉಗ್ರನೆಂದು ಘೋಷಿಸಿದ್ದಾರೆ. ಇದರನ್ವಯ ಅವರ ಚಲನವಲನದ ಮೇಲೆ ಪಾಕ್‌ ಅಧಿಕಾರಿಗಳು ನಿಗಾ ವಹಿಸುವುದಲ್ಲದೆ, ಕಾನೂನು ಕ್ರಮವನ್ನೂ ಕೈಗೊಳ್ಳಬಹುದು ಎನ್ನಲಾಗಿದೆ.

Read more Articles on