ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬಂದರೆ ಜಾತಿ ಆಧರಿತ ಗಣತಿ ನಡೆಸಿ ಸಂಪತ್ತಿನ ಮರುಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ನೀಡಿರುವ ಭರವಸೆಯನ್ನು ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌, ಐಪಿಎಲ್‌ ಕ್ರಿಕೆಟ್‌ಗೆ ಹೋಲಿಸಿ ಟೀಕಿಸಿದ್ದಾರೆ.

ನವದೆಹಲಿ: ಕೇಂದ್ರದಲ್ಲಿ ತಾನು ಅಧಿಕಾರಕ್ಕೆ ಬಂದರೆ ಜಾತಿ ಆಧರಿತ ಗಣತಿ ನಡೆಸಿ ಸಂಪತ್ತಿನ ಮರುಹಂಚಿಕೆ ಮಾಡುವುದಾಗಿ ಕಾಂಗ್ರೆಸ್‌ ನೀಡಿರುವ ಭರವಸೆಯನ್ನು ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌, ಐಪಿಎಲ್‌ ಕ್ರಿಕೆಟ್‌ಗೆ ಹೋಲಿಸಿ ಟೀಕಿಸಿದ್ದಾರೆ.

ಈ ಕುರಿತು ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರಸಾಸ್‌, ‘ಏ.6 ರಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಶ್ರೀಮಂತರ ಹಣವನ್ನು ಬಡವರಿಗೆ ಹಂಚಿಕೆ ಮಾಡಲಿದ್ದೇವೆ ಎಂದು ಹೇಳಿರುವುದು ಐಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಯಾರೆಲ್ಲಾ ಅಗ್ರಸ್ಥಾನದಲ್ಲಿದ್ದಾರೋ ಆ ನಾಲ್ಕೂ ತಂಡಗಳಿಂದ 4 ಅಂಕಗಳನ್ನು ಕೆಳಗಿರುವ ತಂಡಗಳಿಗೆ ನೀಡಿದರೆ ಅವರು ಕ್ವಾಲಿಪೈ ಆಗಿ ಪ್ಲೇಆಪ್‌ಗೆ ಬರುವಂತೆ’ ಇದೆ ಎಂದು ವ್ಯಂಗ್ಯವಾಡಿದ್ದಾರೆ.