ಬ್ರಿಟನ್ ಇಸ್ಲಾಂ ರಾಷ್ಟ್ರವಾಗುವ ದಿನ ದೂರವಿಲ್ಲ : ಮಾಜಿ ಸಚಿವೆ ಸುಯೆಲ್ಲಾ ಬ್ರೇವರ್‌ಮನ್ ಎಚ್ಚರಿಕೆ

| N/A | Published : Jan 31 2025, 12:49 AM IST / Updated: Jan 31 2025, 04:50 AM IST

ಬ್ರಿಟನ್ ಇಸ್ಲಾಂ ರಾಷ್ಟ್ರವಾಗುವ ದಿನ ದೂರವಿಲ್ಲ : ಮಾಜಿ ಸಚಿವೆ ಸುಯೆಲ್ಲಾ ಬ್ರೇವರ್‌ಮನ್ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕದಲ್ಲಿ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಘೋಷಣೆಯಂತೆಯೇ ಬ್ರಿಟನ್ ಸಹ ‘ಮೇಕ್ ಬ್ರಿಟನ್ ಗ್ರೇಟ್ ಅಗೇನ್’ ಆಗುವ ಆವಶ್ಯಕತೆ ಇದೆ   ಎಂದು ಬ್ರಿಟನ್ ಮಾಜಿ ಸಚಿವೆ ಸುಯೆಲ್ಲಾ ಬ್ರೇವರ್‌ಮನ್ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್‌: ಅಮೆರಿಕದಲ್ಲಿ ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೇನ್’ ಘೋಷಣೆಯಂತೆಯೇ ಬ್ರಿಟನ್ ಸಹ ‘ಮೇಕ್ ಬ್ರಿಟನ್ ಗ್ರೇಟ್ ಅಗೇನ್’ ಆಗುವ ಆವಶ್ಯಕತೆ ಇದೆ. ಇಲ್ಲದಿದ್ದರೆ, ಇನ್ನೆರಡು ದಶಕದಲ್ಲಿ ಬ್ರಿಟನ್ ಮುಸ್ಲಿಂ ಮೂಲಭೂತವಾದಿಗಳ ಕೈವಶವಾಗಿ, ಇರಾನ್ ರೀತಿಯಲ್ಲಿ ಪಶ್ಚಿಮದ ವೈರಿಯಾಗುವ ದಿನಗಳನ್ನು ನೋಡಬೇಕಾಗುತ್ತದೆ ಎಂದು ಬ್ರಿಟನ್ ಮಾಜಿ ಸಚಿವೆ ಸುಯೆಲ್ಲಾ ಬ್ರೇವರ್‌ಮನ್ ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸುಯೆಲ್ಲಾ, ‘ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಇತ್ತೀಚೆಗಷ್ಟೇ ಬ್ರಿಟನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಮೊದಲ ಇಸ್ಲಾಮಿಸ್ಟ್ ರಾಷ್ಟ್ರವಾಗಲಿದೆ ಎಂದು ಹೇಳಿದ್ದರು. ಅವರ ಮಾತು ತಮಾಷೆಯೆಂದು ನಾನು ಭಾವಿಸುವುದಿಲ್ಲ. ಬ್ರಿಟನ್ ಮುಸ್ಲಿಂ ಮೂಲಭೂತವಾದಿಗಳ ಕೈವಶವಾದರೆ ನಮ್ಮ ಕಾನೂನು ವ್ಯವಸ್ಥೆ ಶರಿಯಾ ಕಾನೂನಿಗೆ ಪರ್ಯಾಯವಾಗುತ್ತದೆ. ನಮ್ಮ ಪರಮಾಣು ಸಾಮರ್ಥ್ಯಗಳು ಇರಾನ್‌ನಂತೆ ಆಡಳಿತದಲ್ಲಿ ತೊಡಗುತ್ತವೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.