ಸಾರಾಂಶ
ಪರೀಕ್ಷೆ ಬರೆಯುವ ವೇಳೆ ವಿದ್ಯಾರ್ಥಿನಿ ಧರಿಸಿದ್ದ ಹಿಜಾಬ್ ತೆರೆಸಿದ ಆರೋಪದ ಮೇಲೆ ಗುಜರಾತ್‌ನಲ್ಲಿ ಪರೀಕ್ಷಾ ಮೇಲ್ವಿಚಾರಕಿಯನ್ನು ವಜಾ ಮಾಡಲಾಗಿದೆ.
ಪಿಟಿಐ ಭರೂಚ್ (ಗುಜರಾತ್)
ಹಿಜಾಬ್ ಧರಿಸಿ 10ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ತೆಗೆಸಿದ್ದಾರೆ ಎಂಬ ಆರೋಪದಡಿ ಗುರುವಾರ ಪರೀಕ್ಷಾ ಮೇಲ್ವಿಚಾರಕರರನ್ನು ವಜಾ ಮಾಡಲಾಗಿದೆ. ಈ ಘಟನೆ ಗುಜರಾತ್‌ನ ಭರೂಚ್ ಜಿಲ್ಲೆಯ ಅಂಕಲೇಶ್ವರ ಪಟ್ಟಣದ ಲಯನ್ಸ್ ಶಾಲೆಯಲ್ಲಿ ನಡೆದಿದೆ.ಪೋಷಕರ ದೂರಿನ ಆಧಾರದಲ್ಲಿ ಜಿಲ್ಲಾ ಶಿಕ್ಷಣಾಧಿಕಾರಿ ಸ್ವಾತಿ ರಾವಲ್ ಅವರು ಲಯನ್ಸ್ ಶಾಲೆಯ ಪ್ರಾಂಶುಪಾಲರು ಹಾಗೂ ಪರೀಕ್ಷಾ ಮೇಲ್ವಿಚಾರಕಿ ಇಲಾಬೆನ್ ಸುರತಿಯಾ ಅವರನ್ನು ವಜಾ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ವಾತಿ ರಾವಲ್, ಹಿಜಾಬ್ ತೆಗೆಸಿರುವ ಬಗ್ಗೆ ವಿದ್ಯಾರ್ಥಿನಿಯರ ಪೋಷಕರು ನಮಗೆ ದೂರು ನೀಡಿದ್ದಾರೆ. ಶಾಲೆಯ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿದ್ದು, ಘಟನೆಗೆ ಸಂಬಂಧಿದಂತೆ ಸೂಕ್ತ ತನಿಖೆಗೆ ಆದೇಶಿಸಿಲಾಗಿದೆ. ಪರೀಕ್ಷಾ ಮೇಲ್ವಿಚಾರಕರನ್ನು ಬದಲಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.