ಸಾರಾಂಶ
ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ಯೋಜನೆಗಳಿಗೆ 11.11 ಲಕ್ಷ ಕೋಟಿ ರು. ಬಂಡವಾಳ ವೆಚ್ಚ ಮಾಡಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.
ಈ ಬಂಡವಾಳ ವೆಚ್ಚ ಹೆಚ್ಚಳ ಪ್ರಮಾಣವು ಶೇ.11.1ರಷ್ಟಿದೆ.ಈ ಅಂಕಿ ಅಂಶ ನೀಡುವಾಗ ಸಚಿವೆ ನಿರ್ಮಲಾ ಪ್ರಸ್ತಾಪಿಸಿದ ಅಂಕಿ ಅಂಶಗಳು ಎಲ್ಲರ ಗಮನ ಸೆಳೆದವು.
ಕಾರಣ ಬಂಡವಾಳ ವೆಚ್ಚ ಪ್ರಮಾಣ 11.11 ಲಕ್ಷ ಕೋಟಿ ರು. ಅಂದರೆ 1111111 ರು. ಎಂದಿದ್ದರೆ, ಬಂಡವಾಳ ವೆಚ್ಚ ಪ್ರಮಾಣವನ್ನು ಹೆಚ್ಚಿಸಿರುವ ಪ್ರಮಾಣ ಶೇ.11.11ರಷ್ಟಿದೆ. ಅಂದರೆ ಅಲ್ಲಾ ಅಂಕಿಗಳು ಕೇವಲ ಒಂದರ ಅಂಕಿಯಲ್ಲೇ ಇದೆ.
ಕಳೆದ ವರ್ಷ ಖಾಸಗಿ ವಲಯದ ಬಂಡವಾಳ ವೆಚ್ಚ ಪ್ರಮಾಣ ಭಾರೀ ಕುಸಿತ ಕಂಡಿದ್ದ ಕಾರಣ ಕೇಂದ್ರ ಸರ್ಕಾರ ಬಂಡವಾಳ ವೆಚ್ಚವನ್ನು ಶೇ.37.5ರಷ್ಟು ಭಾರೀ ಹೆಚ್ಚಿಸಿತ್ತು.
ಆದರೆ ಈ ವರ್ಷ ಖಾಸಗಿ ವಲಯದಿಂದ ಉತ್ತಮ ಪ್ರಮಾಣದ ಬಂಡವಾಳ ವೆಚ್ಚದ ನಿರೀಕ್ಷೆ ಇರುವ ಕಾರಣ, ಸರ್ಕಾರ ತನ್ನ ಪಾಲಿನ ಏರಿಕೆಯನ್ನು ಸಾಮಾನ್ಯ ಎನ್ನಬಹುದಾದ ಶೇ.11.11ಕ್ಕೆ ಸೀಮಿತಗೊಳಿಸಿದೆ.
ಅಂದರೆ ಮುಂದಿನ ಹಣಕಾಸು ವರ್ಷದಲ್ಲಿ ವಿವಿಧ ಕಾರ್ಯಕ್ರಮಗಳಿಗೆ ಸರ್ಕಾರ ಮಾಡುವ ಬಂಡವಾಳ ವೆಚ್ಚದ ಪ್ರಮಾಣವು 111111 ರು.ನಷ್ಟಿರಲಿದೆ. ಇದು ಒಟ್ಟು ಜಿಡಿಪಿಯ ಶೇ.3.4ರಷ್ಟು ಎಂದು ಸರ್ಕಾರ ಮಾಹಿತಿ ನೀಡಿದೆ.