ಅಕ್ರಮ ಹಣ ವರ್ಗ ಕೇಸಲ್ಲಿ ಬಂಧಿತ ಆಪ್‌ ನಾಯಕ ಜೈನ್‌ 2 ವರ್ಷದ ಬಳಿಕ ಬಿಡುಗಡೆ : ದೆಹಲಿ ಹೈಕೋರ್ಟ್‌ ಜಾಮೀನು

| Published : Oct 19 2024, 12:19 AM IST / Updated: Oct 19 2024, 05:21 AM IST

ಸಾರಾಂಶ

ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ 2 ವರ್ಷದಿಂದ ಬಂಧನಕ್ಕೊಳಗಾಗಿದ್ದ ದೆಹಲಿಯ ಆಪ್‌ ಸರ್ಕಾರದ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ.

ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಳೆದ 2 ವರ್ಷದಿಂದ ಬಂಧನಕ್ಕೊಳಗಾಗಿದ್ದ ದೆಹಲಿಯ ಆಪ್‌ ಸರ್ಕಾರದ ಮಾಜಿ ಸಚಿವ ಸತ್ಯೇಂದ್ರ ಜೈನ್‌ ಅವರಿಗೆ ದೆಹಲಿ ಹೈಕೋರ್ಟ್‌ ಶುಕ್ರವಾರ ಜಾಮೀನು ನೀಡಿದೆ.

ವಿಚಾರಣೆಯಲ್ಲಿ ಭಾರೀ ವಿಳಂವಾಗಿದೆ ಎನ್ನುವ ಕಾರಣ ನೀಡಿ ಮತ್ತು ಸುದೀರ್ಘ ಅವಧಿಯಿಂದ ಬಂಧನಲ್ಲಿ ಇರುವ ವಿಷಯ ಪರಿಗಣಿಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಅಕ್ರಮ ಹಣ ವರ್ಗಾವಣೆ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಜೈಲು ಪಾಲಾಗಿದ್ದ ಆಪ್‌ ನಾಯಕರುಗಳಾದ ಮಾಜಿ ಸಿಎಂ ಅರವಿಂದ್‌ ಕೇಜ್ರಿವಾಲ್‌, ರಾಜ್ಯಸಭಾ ಸದಸ್ಯ ಸಂಜಯ್‌ ಸಿಂಗ್‌, ಮಾಜಿ ಡಿಸಿಎಂ ಮನೀಶ್‌ ಸಿಸೋಡಿಯಾ ಕೂಡಾ ಇತ್ತೀಚೆಗೆ ಬಿಡುಗಡೆಯಾಗಿದ್ದರು.