ಶೀಘ್ರದಲ್ಲೇ ರೈತರ ಖಾತೆಗಳಿಗೆ ಪರಿಹಾರ ಹಣ ಜಮೆ
Nov 02 2025, 02:30 AM ISTಈ ಬಾರಿಯ ಭಾರೀ ಮಳೆಯಿಂದ ರಾಜ್ಯದಾದ್ಯಂತ ಸುಮಾರು ೧೪ ಲಕ್ಷ ೫೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದ್ದು, ಶೀಘ್ರದಲ್ಲೆ ರೈತರ ಖಾತೆಗಳಿಗೆ ಜಮೆ ಮಾಡಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯಾದ್ಯಂತ ೧೮ ಲಕ್ಷಕ್ಕೂ ಹೆಚ್ಚು ರೈತರ ಬೆಳೆ ಹಾನಿ ಸಮೀಕ್ಷೆ ಪೂರ್ಣಗೊಂಡಿದ್ದು, ಹಾನಿಗೊಳಗಾದ ಪ್ರದೇಶದಲ್ಲಿ ಶೀಘ್ರ ಪರಿಹಾರ ನೀಡುವ ಕಾರ್ಯ ಚುರುಕುಗೊಂಡಿದೆ. ಅಲ್ಲದೆ, ಮೂಲಸೌಕರ್ಯ ಮತ್ತು ಆಸ್ತಿ-ಪಾಸ್ತಿ ಸೇರಿ ೩೪೫೦ ಕೋಟಿ ರು. ಹಾನಿಯಾಗಿದ್ದು, ಕೇಂದ್ರ ಸರ್ಕಾರದಿಂದ ೧೫೪೫ ಕೋಟಿ ರು. ಪರಿಹಾರ ಕೇಳಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಎಂದರು.