ಹಣ ದುರುಪಯೋಗ, ಕರ್ತವ್ಯ ಲೋಪ: 3 ಪಿಡಿಒಗಳ ಅಮಾನತು
Mar 20 2025, 01:21 AM ISTದೇವರಹಿಪ್ಪರಗಿ: ತಾಲೂಕಿನ ಹರನಾಳ ಗ್ರಾಮ ಪಂಚಾಯಿತಿಯಲ್ಲಿ ನಡೆದ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸಮ್ಮ ದೊಡಮನಿ ಅವರನ್ನು ಅಮಾನತುಗೊಳಿಸಿ ಜಿಪಂ ಸಿಇಒ ರಿಷಿ ಆನಂದ ಮಂಗಳವಾರ ಆದೇಶ ಹೊರಡಿಸಿದ್ದಾರೆ. ಅಲ್ಲದೇ, ವಿಜಯಪುರದಲ್ಲಿ ಮಂಗಳವಾರ ನಡೆದ ಸಭೆಗೆ ತಡವಾಗಿ ಆಗಮಿಸಿದ ಕೆರೂಟಗಿ ಮತ್ತು ಹಿಟ್ನಳ್ಳಿ ಹಾಗೂ ಕೊಂಡಗೂಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಅಮಾನತು ಮಾಡಿದ್ದಾರೆ.