ಸಾರಾಂಶ
ದೆಹಲಿ ಚಲೋಗೆ ಕರೆ ಕೊಟ್ಟಿರುವ ರೈತರು ಮತ್ತು ಕೇಂದ್ರ ಸರ್ಕಾರದ ನಡುವೆ ನಾಲ್ಕನೇ ಸುತ್ತಿನ ಸಂಧಾನ ಚರ್ಚೆ ನಡೆಯಲಿದೆ.
ನವದೆಹಲಿ: ದೆಹಲಿ ಚಲೋಗೆ ಕರೆಕೊಟ್ಟಿರುವ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರದ ನಡುವೆ ಭಾನುವಾರ ಸಂಜೆ 4ನೇ ಸುತ್ತಿನ ಸಭೆ ನಿಗದಿಯಾಗಿದೆ.
ಗುರುವಾರ ನಡೆದ 3ನೇ ಸುತ್ತಿನ ಮಾತುಕತೆ ಧನಾತ್ಮಕವಾಗಿ ಮುಕ್ತಾಯವಾಗಿದ್ದ ಹಿನ್ನೆಲೆಯಲ್ಲಿ ಭಾನುವಾರದ ಸಭೆ ಬಳಿಕ ಶುಭ ಸುದ್ದಿ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.ಈ ನಡುವೆ 7 ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮೇಲೆ ಹೇರಿದ್ದ ನಿರ್ಬಂಧವನ್ನು ಫೆ.19ರವರೆಗೂ ವಿಸ್ತರಿಸಿ ಹರ್ಯಾಣ ಸರ್ಕಾರ ಶನಿವಾರ ರಾತ್ರಿ ಆದೇಶ ಹೊರಡಿಸಿದೆ.