ಸಾರಾಂಶ
750 ರೈತರಿಗೆ ಸಾವಿಗೆ ಮೋದಿ ಸರ್ಕಾರವೇ ಕಾರಣವೆಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.
ನವದೆಹಲಿ: ರಾಷ್ಟ್ರದ ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸದೇ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತ ಸಮುದಾಯಕ್ಕೆ ಅಂಟಿದ ಶಾಪವಾಗಿ ಹೊರಹೊಮ್ಮಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿ ಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಖರ್ಗೆ, ‘ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ ಅವಧಿಯಲ್ಲಿ ಇದುವರೆಗೂ ಸುಮಾರು 750 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಲ್ಲದೆ ಪ್ರತಿಭಟನೆ ನಡೆಯುವ ಮಧ್ಯೆಯೇ ಮತ್ತೊಬ್ಬ ರೈತ ಪ್ರಾಣತ್ಯಾಗ ಮಾಡಿದರೂ ಸೂಕ್ತ ಬೆಂಬಲ ಬೆಲೆ ಖಾತರಿ ನೀಡದ ಮೋದಿ ಸರ್ಕಾರ ರೈತ ಸಮುದಾಯಕ್ಕೆ ಶಾಪವಾಗಿ ಪರಿಣಮಿಸಿದೆ’ ಎಂದು ಟೀಕಿಸಿದರು.