ಮೀನು ತಿನ್ನೋದಾದ್ರೆ ತಿನ್ನಿ, ವಿಡಿಯೋ ಏಕೆ?: ತೇಜಸ್ವಿಗೆ ರಾಜನಾಥ್ ಟಾಂಗ್
Author : KannadaprabhaNewsNetwork
| Updated : Apr 15 2024, 05:37 AM IST
ರಾಜನಾಥ್ ಸಿಂಗ್ | Kannada Prabha
Image Credit: KP
ಮಾಂಸಹಾರಿ ಆಹಾರವನ್ನು ತಿನ್ನುವುದಾದರೆ ನೀವು ತಿನ್ನಿ. ಆದರೆ ಅದನ್ನು ಜನತೆಗೆ ತೋರಿಸುವುದು ಅವಶ್ಯಕತೆಯಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರ್‌ಜೆಡಿ ನಾಯಕ ಲಾಲು ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಪಟನಾ: ಮಾಂಸಹಾರಿ ಆಹಾರವನ್ನು ತಿನ್ನುವುದಾದರೆ ನೀವು ತಿನ್ನಿ. ಆದರೆ ಅದನ್ನು ಜನತೆಗೆ ತೋರಿಸುವುದು ಅವಶ್ಯಕತೆಯಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರ್‌ಜೆಡಿ ನಾಯಕ ಲಾಲು ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
ಇತ್ತೀಚೆಗಷ್ಟೇ ತೇಜಸ್ವಿ ಯಾದವ್ ನವರಾತ್ರಿಯ ಸಮಯದಲ್ಲಿ ಮೀನು ತಿನ್ನುವ ದೃಶ್ಯಗಳನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ಗೆ ಬಿಜೆಪಿ ಸಭೆಯಲ್ಲಿ ಪ್ರತ್ರಿಕ್ರಿಯೆ ನೀಡಿದ ರಾಜನಾಥ್, ‘ನೀವು ತಿನ್ನುವುದಾದರೆ ಮೀನನ್ನಾದರೂ ತಿನ್ನಿ, ಇಲ್ಲ ಹಂದಿ, ಪಾರಿವಾಳ, ಆನೆ, ಕುದುರೆ ಏನು ಬೇಕಾದರೂ ತಿನ್ನಿ. ಆದರೆ ಅದನ್ನು ಜನರಿಗೆ ತೋರಿಸುವುದೇಕೆ?’ ಎಂದು ಆಕ್ರೋಶ ವ್ಯಕ್ತಪಡಿಸಿದರು.
Latest Videos
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.