ಸಾರಾಂಶ
ಅಗ್ನಿ 5 ಕ್ಷಿಪಣಿಗಾಗಿ ಎಂಐಆರ್‌ವಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆಗೆ ಅನುಮೋದನೆ ನೀಡಿದ್ದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ.
ನವದೆಹಲಿ: ಅಗ್ನಿ 5 ಕ್ಷಿಪಣಿಗಾಗಿ ಎಂಐಆರ್‌ವಿ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಯೋಜನೆಗೆ ಅನುಮೋದನೆ ನೀಡಿದ್ದು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್ ನೇತೃತ್ವದ ಯುಪಿಎ ಸರ್ಕಾರ. ಆದರೆ ಈಗ ಅದರ ಶ್ರೇಯಸ್ಸನ್ನು ಪ್ರಧಾನಿ ನರೇಂದ್ರ ಮೋದಿ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಅಗ್ನಿ-5ನಲ್ಲಿ ಎಂಐಆರ್‌ವಿ ತಂತ್ರಜ್ಞಾನ ಬಳಕೆ ಯಶ ಕಂಡಿದೆ ಎಂದು ಮೋದಿ ನೀಡಿದ ಹೇಳಿಕೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರತಿಕ್ರಿಯಿಸಿ, ಮೊ+ದಲ ಬಾರಿಗೆ ಅಗ್ನಿ 5 ಕ್ಷಿಪಣಿ ಹಾರಿಸಿದ್ದು 2012ರ ಏ.19ರಂದು. ಅದಾದ ನಂತರ ಎಂಐಆರ್‌ವಿ ತಂತ್ರಜ್ಞಾನ ಅಭಿವೃದ್ಧಿಗೆ ಸಿಂಗ್ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಪ್ರಧಾನಿ ಮೋದಿ ಇದು ತಮ್ಮದೇ ಯೋಜನೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಲಾಭ -ಜೀವಿ ಮೋದಿ ಅವರ ಬೂಟಾಟಿಕೆಗೆ ಮಿತಿಯೇ ಇಲ್ಲ ಎಂದಿದ್ದಾರೆ.ಈ ಸಾಧನೆಗಾಗಿ ಡಿಆರ್‌ಡಿಓ ಅನ್ನು ಅಭಿನಂದಿಸಲೇಬೇಕು. ಆದರೆ ಡಿಆರ್‌ಡಿಓ ವಿಜ್ಞಾನಿಗಳ ಮಾನಸಿಕ ಸ್ಥೈರ್ಯ ಕುಗ್ಗಿಸುವ ಯಾವುದೇ ಅವಕಾಶಗಳನ್ನೂ ಮೋದಿ ಬಿಟ್ಟಿಲ್ಲ. ಡಿಆರ್‌ಡಿಒ ಅನ್ನು ಹೇಗೆ ಖಾಸಗೀಕರಣಗೊಳಿಸಬಹುದು ಅಥವಾ ಮುಚ್ಚಬಹುದು ಎಂಬ ಬಗ್ಗೆ ವರದಿ ನೀಡಲು ಕಳೆದ 3 ವರ್ಷಗಳಲ್ಲಿ ಮೋದಿ ಸರ್ಕಾರ 2 ಸಮಿತಿ ರಚಿಸಿತ್ತು ಎಂದು ರಮೇಶ್ ಆರೋಪಿಸಿದರು.