ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿಯಾದ ವೋಕ್ಸೆಲ್‌ಗ್ರಿಡ್ ಮೊದಲ ಸ್ವದೇಶಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿ ಅದನ್ನು ಮಹಾರಾಷ್ಟ್ರದ ಪುಣೆಯ ಚಂದ್ರಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ವೋಕ್ಸೆಲ್‌ಗ್ರಿಡ್ ಕಂಪನಿ ಸತತ 12 ವರ್ಷಗಳ ಶ್ರಮದ ಫಲವಾಗಿ ಈ ಯಂತ್ರ ಅಭಿವೃದ್ಧಿಪಡಿಸಿದೆ.
ನವದೆಹಲಿ : ಬೆಂಗಳೂರು ಮೂಲದ ಸ್ಟಾರ್ಟಪ್ ಕಂಪನಿಯಾದ ವೋಕ್ಸೆಲ್‌ಗ್ರಿಡ್ ಮೊದಲ ಸ್ವದೇಶಿ ಎಂಆರ್‌ಐ ಸ್ಕ್ಯಾನರ್ ಅಭಿವೃದ್ಧಿಪಡಿಸಿ ಅದನ್ನು ಮಹಾರಾಷ್ಟ್ರದ ಪುಣೆಯ ಚಂದ್ರಪುರದ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಅಳವಡಿಸಿದೆ. ವೋಕ್ಸೆಲ್‌ಗ್ರಿಡ್ ಕಂಪನಿ ಸತತ 12 ವರ್ಷಗಳ ಶ್ರಮದ ಫಲವಾಗಿ ಈ ಯಂತ್ರ ಅಭಿವೃದ್ಧಿಪಡಿಸಿದೆ. ಕಂಪನಿಗೆ ಕೇಂದ್ರ ಸರ್ಕಾರ ಮತ್ತು ಝೋಹೋ ಸಂಸ್ಥೆ ಕೂಡಾ ನೆರವು ನೀಡಿವೆ.
ತವರಿಗೆ ಕೊಡುಗೆ :
ಅಮೆರಿಕದಲ್ಲಿ ಉನ್ನತ ಹುದ್ದೆಯಲ್ಲಿದ್ದ ಅರ್ಜನ್ ಅರುಣಾಚಲಂ, ಭಾರತದ ಆರೋಗ್ಯ ವಲಯದಲ್ಲಿನ ಕೊರತೆ ಮನಗಂಡು ಸ್ವದೇಶಿ ಎಂಆರ್‌ಐ ಅಭಿವೃದ್ಧಿಪಡಿಸುವ ಕನಸು ಕಂಡಿದ್ದರು. ಅದರಂತೆ ಬೆಂಗಳೂರಿನಲ್ಲಿ ವೋಕ್ಸೆಲ್‌ಗ್ರಿಡ್ ಕಂಪನಿ ಹುಟ್ಟುಹಾಕಿದ್ದರು. ಅದೀಗ ಫಲ ಕೊಟ್ಟಿದ್ದು, ವಿದೇಶಗಳಿಗಿಂತ ಶೇ.40ರಷ್ಟು ಅಗ್ಗದ ದರದಲ್ಲಿ ಅವರು ಯಂತ್ರ ಅಭಿವೃದ್ಧಿಪಡಿಸಿದ್ದಾರೆ. ಕಂಪನಿಯ ಮೊದಲ ಯಂತ್ರವನ್ನುಮಹಾರಾಷ್ಟ್ರದ ಚಂದ್ರಪುರದಲ್ಲಿರುವ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಅಳವಡಿಸಲಾಗಿದೆ.
ಇದುವರೆಗೂ ಭಾರತ ಪೂರ್ಣಪ್ರಮಾಣದಲ್ಲಿ ಎಂಆರ್‌ಐ ಯಂತ್ರ ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿತ್ತು. ಇಂಥ ಪ್ರತಿಯಂತ್ರಗಳಿಗೆ 3-6 ಕೋಟಿ ರು. ಬೆಲೆ ಇದೆ. ದರೆ ಇದೀಗ ದೇಶೀಯವಾಗಿ ಲಭ್ಯವಾಗುವ ಕಾರಣ ಅವು ಶೇ.40ರಷ್ಟು ಅಗ್ಗದ ದರದಲ್ಲಿ ಸಿಗಲಿದೆ ಜೊತೆಗೆ ಇವುಗಳಲ್ಲಿ ಲಿಕ್ವಿಡ್ ಹೀಲಿಯಂ ಎಂಬ ಅಂಶ ಬಳಸದೇ ಇರುವ ಕಾರಣ ವಿದ್ಯುತ್ ಬಳಕೆಯನ್ನು ಇದು ಗಣನೀಯವಾಗಿ ಕಡಿಮೆ ಮಾಡಲಿದೆ. ಜೊತೆಗೆ ನಿರ್ವಹಣೆಯೂ ಸುಲಭವಾಗಲಿದೆ.
ಪೇಪರ್ ಯೂಸ್:
ವೋಕ್ಸೆಲ್ ಗ್ರಿಡ್ ಕಂಪನಿಯು ಆಸ್ಪತ್ರೆಗಳಿಗೆ ‘ಪೇ ಪರ್ ಯೂಸ್’ ಎಂಬ ಹೊಸ ಪಾವತಿ ವಿಧಾನವನ್ನು ಪರಿಚಯಿಸುವ ಪರಿಕಲ್ಪನೆ ಕೊಟ್ಟಿದೆ. ಇದರಡಿ ಕೇವಲ ಬಳಕೆ ಮಾಡಿದ್ದಕ್ಕಷ್ಟೇ ಆಸ್ಪತ್ರೆಗಳು ಪಾವತಿ ಮಾಡಲಿವೆ. ಬೆಂಗಳೂರು ಸ್ಟಾರ್ಟಪ್ ವರ್ಷಕ್ಕೆ 20-25 ಯಂತ್ರಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದೆ.ಸ್ಕ್ಯಾನರ್ ಉದ್ದೇಶ:
ಇಡೀ ದೇಹದ ಯಾವುದೇ ಭಾಗದಲ್ಲಿನ ಆಗಿರಬಹುದಾದ ತೊಂದರೆಗಳ ಕುರಿತ ನಿಖರ ಮಾಹಿತಿಗೆ ಎಂಆರ್‌ಐ ಸ್ಕ್ಯಾನರ್‌ಗಳನ್ನು ಬಳಸಲಾಗುತ್ತದೆ.