ಸಾರಾಂಶ
3 ವರ್ಷಗಳ ಹಿಂದೆ ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ್ದ ಹೆಸರಾಂತ ಕಾರು ಉತ್ಪಾದನಾ ಕಂಪೆನಿ ಫೋರ್ಡ್, ಮತ್ತೆ ಭಾರತ ಪ್ರವೇಶಿಸಿದೆ. ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ಪುನಾರಂಭಿಸಲು ಈಗ ಅದು ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಕೋರಿಕೆ ಪತ್ರ ಸಲ್ಲಿಸಿದೆ.
ಚೆನ್ನೈ: 3 ವರ್ಷಗಳ ಹಿಂದ ಭಾರತದಲ್ಲಿ ಉತ್ಪಾದನೆ ನಿಲ್ಲಿಸಿದ್ದ ಹೆಸರಾಂತ ಕಾರು ಉತ್ಪಾದನಾ ಕಂಪೆನಿ ಫೋರ್ಡ್, ಮತ್ತೆ ಭಾರತ ಪ್ರವೇಶಿಸಿದೆ. ತಮಿಳುನಾಡಿನಲ್ಲಿ ತನ್ನ ಉತ್ಪಾದನಾ ಘಟಕವನ್ನು ಪುನಾರಂಭಿಸಲು ಈಗ ಅದು ನಿರ್ಧರಿಸಿದ್ದು, ರಾಜ್ಯ ಸರ್ಕಾರಕ್ಕೆ ಕೋರಿಕೆ ಪತ್ರ ಸಲ್ಲಿಸಿದೆ.
ಫೋರ್ಡ್ ಮೋಟರ್ಸ್, 2021ರಲ್ಲಿ ದೇಶೀಯ ಮಾರಾಟಕ್ಕಾಗಿ ಭಾರತದಲ್ಲಿ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿತ್ತು. ಅಂತೆಯೇ ಇತರ ಸ್ಪರ್ಧಿಗಳ ಪೈಪೋಟಿ ತಾಳಲಾರದೇ 2022ರಲ್ಲಿ ರಫ್ತಿಗೂ ಕಡಿವಾಣ ಹಾಕಿತ್ತು.ಆದರೆ ಇತ್ತೀಚೆಗೆ ರಫ್ತು ಮಾಡುವ ಸಲುವಾಗಿ ಉತ್ಪಾದನೆಯನ್ನು ಪುನಃ ಪ್ರಾರಂಭಿಸಲು ತನ್ನ ಜತೆ ಫೋರ್ಡ್ ಮಾತುಕತೆ ನಡೆಸುತ್ತಿದೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಇತ್ತೀಚೆಗೆ ಹೇಳಿದ್ದರು. ಇದರ ಬೆನ್ನಲ್ಲೇ ಫೋರ್ಡ್ ಈ ಕುರಿತ ಉದ್ದೇಶ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. ಈಗ ಫೋರ್ಡ್ ಉತ್ಪಾದಿಸಲಿರುವ ಕಾರುಗಳು ಹಾಗು ಇತರೆ ಮಾಹಿತಿಗಳನ್ನು ಶೀಘ್ರದಲ್ಲಿ ಬಹಿರಂಗಪಡಿಸಲಾಗುವುದು.