ಸಾರಾಂಶ
80 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಮನೆಯಿಂದಲೇ ಮತದಾನ ಯೋಜನೆ ಅಡಿಯಲ್ಲಿ ದೆಹಲಿಯ ಮತದಾರರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ ಶನಿವಾರ ತಮ್ಮ ಮನೆಗಳಲ್ಲಿಯೇ ಮತ ಚಲಾಯಿಸಿದ್ದಾರೆ.
ನವದೆಹಲಿ: 80 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಚುನಾವಣಾ ಆಯೋಗ ಜಾರಿಗೆ ತಂದಿರುವ ಮನೆಯಿಂದಲೇ ಮತದಾನ ಯೋಜನೆ ಅಡಿಯಲ್ಲಿ ದೆಹಲಿಯ ಮತದಾರರಾದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಮಾಜಿ ಉಪಪ್ರಧಾನಿ ಎಲ್.ಕೆ ಅಡ್ವಾಣಿ ಶನಿವಾರ ತಮ್ಮ ಮನೆಗಳಲ್ಲಿಯೇ ಮತ ಚಲಾಯಿಸಿದ್ದಾರೆ.
ಸಿಂಗ್ ಮತ್ತು ಅಡ್ವಾಣಿಯವರಂತೆಯೇ , ಮಾಜಿ ಉಪ ಪ್ರಧಾನಿ ಮೊಹಮ್ಮದ್ ಹಮೀದ್ ಅನ್ಸಾರಿ ಮತ್ತು ಕೇಂದ್ರದ ಮಾಜಿ ಸಚಿವ ಮುರುಳಿ ಮನೋಹರ್ ಜೋಷಿ ಕೂಡ ದೆಹಲಿಯಲ್ಲಿ ತಮ್ಮ ನಿವಾಸದಲ್ಲಿಯೇ ಮತ ಚಲಾಯಿಸಿದ್ದಾರೆ. ದೆಹಲಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ.25ರಂದು ಮತದಾನ ನಡೆಯಲಿದೆ.