ಸಾರಾಂಶ
‘ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ವಿಯೆಟ್ನಾಂನಲ್ಲಿಯೇ ಇರುತ್ತಾರೆ. ಆ ದೇಶದ ಬಗ್ಗೆ ಅವರು ತಮಗಿರುವ ಅಸಾಧಾರಣ ಪ್ರೀತಿಯನ್ನು ವಿವರಿಸಬೇಕಾದ ಅಗತ್ಯವಿದೆ’ ಎಂದು ರಾಗಾ ವಿದೇಶ ಪ್ರವಾಸವನ್ನು ಬಿಜೆಪಿ ಟೀಕಿಸಿದೆ.
ನವದೆಹಲಿ: ‘ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಸ್ವಕ್ಷೇತ್ರದಲ್ಲಿ ಸಮಯ ಕಳೆಯುವುದಕ್ಕಿಂತ ಹೆಚ್ಚಾಗಿ ವಿಯೆಟ್ನಾಂನಲ್ಲಿಯೇ ಇರುತ್ತಾರೆ. ಆ ದೇಶದ ಬಗ್ಗೆ ಅವರು ತಮಗಿರುವ ಅಸಾಧಾರಣ ಪ್ರೀತಿಯನ್ನು ವಿವರಿಸಬೇಕಾದ ಅಗತ್ಯವಿದೆ’ ಎಂದು ರಾಗಾ ವಿದೇಶ ಪ್ರವಾಸವನ್ನು ಬಿಜೆಪಿ ಟೀಕಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ , ‘ರಾಹುಲ್ ಗಾಂಧಿ ವಿಯೆಟ್ನಾಂಗೆ ಹೋಗಿದ್ದಾರೆಂದು ನಾನು ಕೇಳಿದೆ. ಹೊಸ ವರ್ಷದ ವೇಳೆಯೂ ಅವರು ಆಗ್ನೇಯ ದೇಶದಲ್ಲಿದ್ದರು. ಸುಮಾರು 22 ದಿನಗಳಲ್ಲಿ ಅಲ್ಲಿ ಕಳೆದಿದ್ದರು. ಅವರು ತಮ್ಮ ಕ್ಷೇತ್ರದಲ್ಲೂ ಇಷ್ಟು ದಿನಗಳನ್ನು ಕಳೆಯುವುದಿಲ್ಲ. ಇದ್ದಕ್ಕಿದಂತೆ ವಿಯೆಟ್ನಾಂ ಮೇಲೆ ಇಷ್ಟೊಂದು ಪ್ರೀತಿ ಬೆಳೆಯಲು ಕಾರಣವೇನು?’ ಎಂದರು.‘ಅವರು ವಿರೋಧ ಪಕ್ಷದ ನಾಯಕ. ಹೆಚ್ಚು ಭಾರತದಲ್ಲಿಯೇ ಇರಬೇಕು. ಹೀಗಿದ್ದರೂ ರಾಹುಲ್ ವಿಯೆಟ್ನಾಂ ಬಗ್ಗೆ ಹೊಂದಿರುವ ಅಸಾಧಾರಣ ಪ್ರೀತಿ ವಿವರಿಸಬೇಕಾಗಿದೆ’ ಎಂದರು.
ಇದಕ್ಕೆ ಕಾಂಗ್ರೆಸ್ ಪ್ರತಿಕ್ರಿಯಿಸಿದ್ದು, ಬಿಜೆಪಿ ಖಾಸಗಿ ಭೇಟಿಗಳನ್ನು ರಾಜಕೀಯಗೊಳಿಸುತ್ತಿದೆ ಎಂದಿದೆ.