ಸಾರಾಂಶ
ಸರ್‌ಕ್ರೀಕ್ ಪ್ರದೇಶದಲ್ಲಿ ಏನಾದರೂ ದುಸ್ಸಾಹಸ ಮೆರೆದರೆ ಇಡೀ ಪ್ರದೇಶದ ಭೌಗೋಳಿಕತೆ ಹಾಗೂ ಇತಿಹಾಸವನ್ನೇ ಬದಲಾವಣೆ ಮಾಡುವ ರೀತಿಯ ಉತ್ತರ ನೀಡಲಾಗುವುದು. ಕರಾಚಿಯೆಡೆಗಿನ ಒಂದು ದಾರಿ ಸರ್‌ಕ್ರೀಕ್ ಮೂಲಕವೇ ಹಾದು ಹೋಗುತ್ತದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು - ರಾಜನಾಥ್ ಸಿಂಗ್
ನವದೆಹಲಿ/ಭುಜ್: ಪಾಕಿಸ್ತಾನವು ವಿವಾದಿತ ಸರ್‌ಕ್ರೀಕ್ ಪ್ರದೇಶದಲ್ಲಿ ಏನಾದರೂ ದುಸ್ಸಾಹಸ ಮೆರೆದರೆ ಇಡೀ ಪ್ರದೇಶದ ಭೌಗೋಳಿಕತೆ ಹಾಗೂ ಇತಿಹಾಸವನ್ನೇ ಬದಲಾವಣೆ ಮಾಡುವ ರೀತಿಯ ಉತ್ತರ ನೀಡಲಾಗುವುದು. ಕರಾಚಿಯೆಡೆಗಿನ ಒಂದು ದಾರಿ ಸರ್‌ಕ್ರೀಕ್ ಮೂಲಕವೇ ಹಾದು ಹೋಗುತ್ತದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಸಿದ್ದಾರೆ.
ವಿಜಯದಶಮಿ ಹಿನ್ನೆಲೆಯಲ್ಲಿ ಗುಜರಾತ್‌ನ ಭುಜ್‌ನಲ್ಲಿ ಸೇನೆಯ ಶಸ್ತ್ರ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿವಾದಿತ ಸರ್ ಕ್ರೀಕ್ ಪ್ರದೇಶದಲ್ಲಿ ಪಾಕಿಸ್ತಾನ ಭಾರೀ ಪ್ರಮಾಣದಲ್ಲಿ ಸೇನಾ ಮೂಲಸೌಕರ್ಯ ಅಭಿವೃದ್ಧಿಪಡಿಸುತ್ತಿರುವ ವರದಿಗಳ ಹಿನ್ನೆಲೆಯಲ್ಲಿ ಈ ಎಚ್ಚರಿಕೆಯ ಸಂದೇಶ ರವಾನಿಸಿದರು.
ಭಾರತವು ಮಾತುಕತೆ ಮೂಲಕ ಗಡಿವಿವಾದವನ್ನು ಇತ್ಯರ್ಥ ಪಡಿಸಲು ಹಲವು ಬಾರಿ ಪ್ರಯತ್ನಿಸಿದೆ. ಆದರೆ, ಪಾಕಿಸ್ತಾನದ ಉದ್ದೇಶ ಮಾತ್ರ ಬೇರೆಯೇ ಇದೆ. ಇತ್ತೀಚೆಗೆ ಸರ್‌ಕ್ರೀಕ್ ಸುತ್ತಮುತ್ತ ಪಾಕಿಸ್ತಾನ ಸೇನೆಯು ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನೋಡಿದರೆ ಅದರ ಉದ್ದೇಶ ಸ್ಪಷ್ಟವಾಗಿದೆ ಎಂದು ಹೇಳಿದರು.
1965ರಲ್ಲಿ ಭಾರತೀಯ ಸೇನೆಯು ಲಾಹೋರ್‌ಗೆ ತಲುಪುವ ಧೈರ್ಯ ಪ್ರದರ್ಶಿಸಿತ್ತು. ಈಗ 2025ರಲ್ಲಿ ಸರ್‌ಕ್ರೀಕ್ ಮೂಲಕವೇ ಕರಾಚಿಯೆಡೆಗಿನ ದಾರಿ ಸಾಗುತ್ತದೆ ಎಂಬುದನ್ನು ಪಾಕಿಸ್ತಾನ ಮರೆಯಬಾರದು ಎಂದು ಹೇಳಿದರು.
ಸರ್‌ಕ್ರೀಕ್ 96 ಕಿ.ಮೀ. ಉದ್ದದ ಪ್ರದೇಶವಾಗಿದ್ದು, ಗುಜರಾತ್‌ನ ರಣ್ ಆಫ್ ಕಚ್‌ನಿಂದ ಪಾಕಿಸ್ತಾನ ಸಿಂಧ್ ಪ್ರಾಂತ್ಯವನ್ನು ಪ್ರತ್ಯೇಕಿಸುತ್ತದೆ. ಇದು ವಿವಾದಾತ್ಮಕ ಪ್ರದೇಶವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ರಾಜನಾಥ್ ಸಿಂಗ್, ಸ್ವಾತಂತ್ರ್ಯ ಸಿಕ್ಕಿ 78 ವರ್ಷಗಳ ಬಳಿಕವೂ ಪಾಕಿಸ್ತಾನವು ನಮ್ಮ ಸರ್ ಕ್ರೀಕ್ ಸೆಕ್ಟರ್‌ನಲ್ಲಿ ವಿವಾದಗಳನ್ನು ಸೃಷ್ಟಿಸುವ ಕೆಲಸ ಮುಂದುವರಿಸಿದೆ. ಇತ್ತೀಚೆಗೆ ಸರ್‌ಕ್ರೀಕ್ ಸುತ್ತಮುತ್ತ ಪಾಕಿಸ್ತಾನ ಸೇನೆಯು ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ನೋಡಿದರೆ ಅದರ ಉದ್ದೇಶ ಸ್ಪಷ್ಟವಾಗಿದೆ ಎಂದು ಹೇಳಿದರು.
ಆಪರೇಷನ್ ಸಿಂದೂರ ಕಾರ್ಯಾಚರಣೆ ಕುರಿತೂ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಭಾರತಕ್ಕೆ ಸಾಮರ್ಥ್ಯವಿದ್ದರೂ ತಾಳ್ಮೆ ಪ್ರದರ್ಶಿಸಿತು. ಆ ಕಾರ್ಯಾಚರಣೆಯನ್ನು ಕೇವಲ ಭಯೋತ್ಪಾದನೆ ನಿಗ್ರಹಕ್ಕೆ ಸೀಮಿತಗೊಳಿಸುವ ಮೂಲಕ ವಿಸ್ತೃತ ಯುದ್ಧಕ್ಕೆ ಪ್ರಚೋದನೆಯಾದಂತೆ ನೋಡಿಕೊಂಡಿತು ಎಂದರು.
ಎಂದು ರಾಜನಾಥ್ ಸಿಂಗ್ ಆರೋಪಿಸಿದರು.