ಸಾರಾಂಶ
ಮುಂಬೈನಲ್ಲಿ ಮೇಲಧಿಕಾರಿಗಳ ಅನುಮತಿ ಪಡೆಯದೆ ಬೃಹತ್ ಜಾಹೀರಾತು ಫಲಕ ಅಳವಡಿಕೆಗೆ ಅನುಮತಿ ನೀಡಿದ್ದ ಐಪಿಎಸ್ ಅಧಿಕಾರಿ ಕೈಸರ್ ಖಾಲಿದ್‌ರನ್ನು ಅಮಾನತು ಮಾಡಲಾಗಿದೆ.
ಮುಂಬೈ: ಇಲ್ಲಿನ ಟ್ಕೋರ್ಪರ್ ಪ್ರದೇಶದಲ್ಲಿ ನಿಯಮ ಮೀರಿ ಬೃಹತ್ ಜಾಹೀರಾತು ಫಲಕ ಅಳವಡಿಕೆಗೆ ಅವಕಾಶ ನೀಡಿ 17 ಜನರ ಸಾವಿಗೆ ಕಾರಣರಾಗಿದ್ದ ಐಪಿಎಸ್ ಅಧಿಕಾರಿ ಕೈಸರ್ ಖಾಲಿದ್‌ರನ್ನು ಅಮಾನತು ಮಾಡಿ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮುಂಬೈನಲ್ಲಿ ನಿಯಮಬಾಹಿರವಾಗಿ 140*120 ಅಡಿಯ ಬೃಹತ್ ಜಾಹೀರಾತು ಫಲಕ ಅಳವಡಿಕೆಗೆ ಆಗ ಸರ್ಕಾರಿ ರೈಲ್ವೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದ ಕೈಸರ್ ಖಾಲಿದ್ ಮಹಾರಾಷ್ಟ್ರ ಗೃಹ ಇಲಾಖೆಯ ಅನುಮತಿ ಪಡೆಯದೆ ಒಪ್ಪಿಗೆ ನೀಡಿದ್ದರು. ಹಾಗಾಗಿ ಅವರನ್ನು ಕರ್ತವ್ಯಲೋಪದ ಅಡಿಯಲ್ಲಿ ಅಮಾನತು ಮಾಡಿ ಆದೇಶಿಸಲಾಗಿದೆ.