ಸಾರಾಂಶ
ವಿಶ್ವಸಂಸ್ಥೆ ನೀತಿ ನಿರ್ಧಾರ ಕೈಗೊಳ್ಳುವ ಜಾಗತಿಕ ಸಂಸ್ಥೆಗಳಲ್ಲಿ ಗ್ಲೋಬಲ್ ಸೌತ್ ಎಂದು ಕರೆಯಲಾಗುವ ದೇಶಗಳಿಗೆ ಸ್ಥಾನ ಕಲ್ಪಿಸುವ ಕುರಿತು ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವಿಲ್ಲದ ಜಾಗತಿಕ ಸಂಘಟನೆಗಳು ನೆಟ್ವರ್ಕ್ ಇಲ್ಲದ ಸಿಮ್ ಇರುವ ಮೊಬೈಲ್‌ನಂತೆ ಎಂದು ವ್ಯಂಗ್ಯ
ರಿಯೋ ಡಿ ಜನೈರೋ: ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸೇರಿದಂತೆ ನೀತಿ ನಿರ್ಧಾರ ಕೈಗೊಳ್ಳುವ ಜಾಗತಿಕ ಸಂಸ್ಥೆಗಳಲ್ಲಿ ಗ್ಲೋಬಲ್ ಸೌತ್ ಎಂದು ಕರೆಯಲಾಗುವ ದೇಶಗಳಿಗೆ ಸ್ಥಾನ ಕಲ್ಪಿಸುವ ಕುರಿತು ಬಲವಾದ ವಾದ ಮಂಡಿಸಿರುವ ಪ್ರಧಾನಿ ನರೇಂದ್ರ ಮೋದಿ, ನಾವಿಲ್ಲದ ಜಾಗತಿಕ ಸಂಘಟನೆಗಳು ನೆಟ್ವರ್ಕ್ ಇಲ್ಲದ ಸಿಮ್ ಇರುವ ಮೊಬೈಲ್‌ನಂತೆ ಎಂದು ವ್ಯಂಗ್ಯವಾಡಿದ್ದಾರೆ.
ಬ್ರೆಜಿಲ್‌ನ ರಿಯೋ ಡಿ ಜನೈರೋದಲ್ಲಿ ಭಾನುವಾರ ಆರಂಭವಾದ ಬ್ರಿಕ್ಸ್ ದೇಶಗಳ ಶೃಂಗಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಗ್ಲೋಬಲ್ ಸೌತ್ ದೇಶಗಳು ಸದಾ ದ್ವಿಮುಖ ನೀತಿಯ ಬಲಿಪಶಗಳಾಗಿವೆ ಮತ್ತು ಜಾಗತಿಕ ಆರ್ಥಿಕತೆಗೆ ಪ್ರಮುಖ ಪಾಲು ನೀಡುವ ದೇಶಗಳನ್ನು ನೀತಿ ನಿರ್ಧಾರ ಕೈಗೊಳ್ಳುವ ಪ್ರಮುಖ ಸಂಸ್ಥೆಗಳಿಂದ ಹೊರಗಿಡಲಾಗಿದೆ. ಹೀಗಾಗಿ ಭದ್ರತಾ ಮಂಡಳಿ ಸೇರಿದಂತೆ ಮಹತ್ವದ ಸಂಘಟನೆಗಳಲ್ಲಿ ತ್ವರಿತವಾಗಿ ಬದಲಾವಣೆ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಮನಕುಲದ ಮೂರನೇ ಎರಡು ಭಾಗಕಕ್ಕೆ 20ನೇ ಶತಮಾನದಲ್ಲಿ ರಚಿಸಲಾದ ಜಾಗತಿಕ ಸಂಸ್ಥೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಕ್ಕಿಲ್ಲ. ಗ್ಲೋಬಲ್ ಸೌತ್ ಇಲ್ಲದ ಇಂಥ ಸಂಸ್ಥೆಗಳು ಸಿಮ್ ಕಾರ್ಡ್ ಇರುವ ಆದರೆ ನೆಟ್‌ವರ್ಕ್ ಇಲ್ಲದ ಮೊಬೈಲ್‌ನಂತೆ ಎಂದು ವ್ಯಂಗ್ಯವಾಡಿದ್ದಾರೆ.
ಗ್ಲೋಬಲ್ ಸೌತ್:
ಕೈಗಾರಿಕಾಕರಣಗೊಂಡ ದೇಶಗಳ ದಕ್ಷಿಣಕ್ಕೆ ಬರುವ, ಕೈಗಾರಿಕಾವಾಗಿ ಮತ್ತು ಆರ್ಥಿಕವಾಗಿ ಕಡಿಮೆ ಶಕ್ತಿ ಹೊಂದಿರುವ ದೇಶಗಳನ್ನು ಗ್ಲೋಬಲ್ ಸೌತ್ ಎನ್ನಲಾಗುತ್ತದೆ.