74, 000 ತಲುಪಿದ ಚಿನ್ನದ ಬೆಲೆ!

| Published : Apr 11 2024, 12:49 AM IST / Updated: Apr 11 2024, 05:49 AM IST

ಸಾರಾಂಶ

ಹಬ್ಬ, ಮದುವೆ ಋತು ಆರಂಭದ ಬೆನ್ನಲ್ಲೇ ಬೆಲೆ ಗಗನಕ್ಕೆ ಏರಿದ್ದು, ಚಿನ್ನ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಜೊತೆಗೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಕೂಡ ಇತಿಹಾಸದಲ್ಲೇ ಮೊದಲ ಬಾರಿಗೆ 75 ಸಾವಿರ ರು.ಗಳ ಗಡಿ ತಲುಪಿದೆ.

ಮುಂಬೈ/ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ಬೆಲೆ ದರ ಏರಿಕೆ ಮುಂದುವರೆದಿದ್ದು, ಎರಡೂ ಲೋಹಗಳ ಬೆಲೆ ಬುಧವಾರ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ.

ಬೆಂಗಳೂರು ಚಿನಿವಾರ ಪೇಟೆಯಲ್ಲಿ 99.5 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 74060 ರು.ಗೆ ತಲುಪಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 84600 ರು. ತಲುಪಿದೆ. ಇನ್ನು ಮುಂಬೈನಲ್ಲಿ 99.5 ಕ್ಯಾರೆಟ್‌ ಶುದ್ಧತೆಯ ಚಿನ್ನದ ಬೆಲೆ 10 ಗ್ರಾಂಗೆ 71535 ರು. ತಲುಪಿದ್ದರೆ, 99.9 ಶುದ್ಧತೆಯ ಚಿನ್ನದ ಬೆಲೆ 71823 ರು.ಗೆ ತಲುಪಿದೆ.

ಹಬ್ಬದ ದಿನಗಳು ಆರಂಭವಾಗಿರುವುದು, ಮದುವೆ ಸೀಸನ್‌ ನಡೆಯುತ್ತಿರುವುದು ಮತ್ತು ಹೂಡಿಕೆದಾರರು ಚಿನ್ನದ ಗಟ್ಟಿ ಖರೀದಿಗೆ ಮುಂದಾಗಿರುವುದು ಈ ಬೆಲೆ ಏರಿಕೆಗೆ ಕಾರಣವೆನ್ನಲಾಗಿದೆ.