ಸಾರಾಂಶ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ನಡುವೆ ತೆರಿಗೆ ಸಮರದಿಂದಾಗಿ ಗಗನಮುಖಿಯಾಗಿರುವ ಚಿನ್ನವು ಬುಧವಾರ ಮತ್ತೆ ಏರುಗತಿ ಹಿಡಿದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬಂಗಾರ ಬೆಲೆ 98100 ರು.ಗೆ ತಲುಪಿದೆ. ಅಂದರೆ 1ಲಕ್ಷ ರು.ಗೆ ಕೇವಲ 1900 ರು.ಕಡಿಮೆ ಇದೆ.
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ನಡುವೆ ತೆರಿಗೆ ಸಮರದಿಂದಾಗಿ ಗಗನಮುಖಿಯಾಗಿರುವ ಚಿನ್ನವು ಬುಧವಾರ ಮತ್ತೆ ಏರುಗತಿ ಹಿಡಿದಿದೆ. ರಾಷ್ಟ್ರರಾಜಧಾನಿ ದೆಹಲಿಯಲ್ಲಿ 10 ಗ್ರಾಂ ಬಂಗಾರ ಬೆಲೆ 98100 ರು.ಗೆ ತಲುಪಿದೆ. ಅಂದರೆ 1ಲಕ್ಷ ರು.ಗೆ ಕೇವಲ 1900 ರು.ಕಡಿಮೆ ಇದೆ.
ಬುಧವಾರ 24 ಕ್ಯಾರಟ್ ಚಿನ್ನದ ಬೆಲೆ ಒಂದೇ ದಿನ 1650 ರು. ಏರಿಕೆಯಿಂದಾಗಿ ಅಮೂಲ್ಯ ಲೋಹವು 96,450 ರು.ನಿಂದ 98,100 ರು.ಗೆ ಜಿಗಿದಿದೆ. ಈ ಬೆಲೆಯು ಇನ್ನು ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಇನ್ನು 22 ಕ್ಯಾರಟ್ ಚಿನ್ನದ ಬೆಲೆಯೂ ಸಹ 1650 ರು. ಏರಿಕೆಯಾಗಿ 10 ಗ್ರಾಂಗೆ 97,650 ರು.ಗೆ ನೆಗೆದಿದೆ.
ಜ.1ರಿಂದ ಏ.16ರವರೆಗೆ 24 ಕ್ಯಾರಟ್ ಚಿನ್ನ ಬೆಲೆಯು ಶೇ.23.56ರಷ್ಟು ಅಂದರೆ 18,710 ರು. ಏರಿಕೆಯಾಗಿದೆ.
ಮತ್ತೊಂದೆಡೆ ಬೆಳ್ಳಿ ಬೆಲೆ ಸಹ ಏರುಗತಿಯಲ್ಲಿಯೇ ಇದ್ದು, 1 ಕೇಜಿ ಬೆಲೆ 1900 ಏರಿಕೆಯಾಗಿ, 99,400 ರು.ಗೆ ತಲುಪಿದೆ.