ಸಾರಾಂಶ
ಚಿನ್ನದ ದರ ಏರಿಕೆ ಪರ್ವ ಮುಂದುವರೆದಿದ್ದು, ಸೋಮವಾರ ಒಂದೇ ದಿನ 10 ಗ್ರಾಂ ಚಿನ್ನದ ದರದಲ್ಲಿ ಭರ್ಜರಿ 2430 ರು.ನಷ್ಟು ಏರಿಕೆಯಾಗಿದೆ. ಪರಿಣಾಮ ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ದಾಖಲೆಯ 88,500 ರು.ಗೆ ತಲುಪಿದೆ.
ನವದೆಹಲಿ: ಚಿನ್ನದ ದರ ಏರಿಕೆ ಪರ್ವ ಮುಂದುವರೆದಿದ್ದು, ಸೋಮವಾರ ಒಂದೇ ದಿನ 10 ಗ್ರಾಂ ಚಿನ್ನದ ದರದಲ್ಲಿ ಭರ್ಜರಿ 2430 ರು.ನಷ್ಟು ಏರಿಕೆಯಾಗಿದೆ. ಪರಿಣಾಮ ದೆಹಲಿ ಮಾರುಕಟ್ಟೆಯಲ್ಲಿ 10 ಗ್ರಾಂ ಚಿನ್ನದ ಬೆಲೆ ದಾಖಲೆಯ 88,500 ರು.ಗೆ ತಲುಪಿದೆ.
ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ, ಚಿಲ್ಲರೆ ಮತ್ತು ಆಭರಣ ವ್ಯಾಪಾರಿಗಳು ಭಾರೀ ಪ್ರಮಾಣದಲ್ಲಿ ಚಿನ್ನ ಖರೀದಿ ಮಾಡುತ್ತಿರುವುದು, ವಿವಿಧ ದೇಶಗಳ ಮೇಲೆ ಅಮೆರಿಕ ಹೇರುತ್ತಿರುವ ತೆರಿಗೆ, ಜಾಗತಿಕ ಬಿಕ್ಕಟ್ಟು ಮೊದಲಾದ ಸಂಗತಿಗಳು ಚಿನ್ನಕ್ಕೆ ಬೇಡಿಕೆ ಹೆಚ್ಚಾಗುವಂತೆ ಮಾಡಿ, ದರ ಏರಿಕೆಗೆ ಕಾರಣವಾಗಿದೆ. ಇನ್ನು ಬೆಳ್ಳಿ ದರದಲ್ಲಿಯೂ ಸೋಮವಾರ ಏರಿಕೆ ಕಂಡು ಬಂದಿದ್ದು, 1 ಸಾವಿರ ರು. ಏರಿಕೆಯೊಂದಿಗೆ 97,500 ರು.ಗೆ ತಲುಪಿದೆ.