ಸಾರಾಂಶ
ವಿಶ್ವದ ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ-ಚೀನಾಗಳ ನಡುವೆ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಿನಲ್ಲಿ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 1 ಲಕ್ಷ ರು. ತಲುಪುವತ್ತ ದಾಪುಗಾಲು ಹಾಕುತ್ತಿದೆ.
ನವದೆಹಲಿ: ವಿಶ್ವದ ಬಲಿಷ್ಠ ಆರ್ಥಿಕತೆಗಳಾದ ಅಮೆರಿಕ-ಚೀನಾಗಳ ನಡುವೆ ವ್ಯಾಪಾರ ಸಮರ ನಡೆಯುತ್ತಿರುವ ಹೊತ್ತಿನಲ್ಲಿ, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಚಿನ್ನದ ಬೆಲೆ 1 ಲಕ್ಷ ರು. ತಲುಪುವತ್ತ ದಾಪುಗಾಲು ಹಾಕುತ್ತಿದೆ.
ಸೋಮವಾರ ಶೇ.99.9 ಶುದ್ಧತೆಯ 10 ಗ್ರಾಂ ಚಿನ್ನದ ಬೆಲೆ 1,650 ರು. ಏರಿಕೆಯಾಗಿ 99,800 ರು. ತಲುಪಿದೆ. ಅತ್ತ ಶೇ. 99.5ರಷ್ಟು ಶುದ್ಧತೆಯ ಚಿನ್ನದ ಬೆಲೆ 1,600 ರು. ಏರಿದ್ದು, 99,300 ರು.ಗೆ ತಲುಪಿದೆ. ಬೆಳ್ಳಿ ಬೆಲೆಯಲ್ಲಿ 500 ರು. ಏರಿಕೆಯಾಗಿ ಕೆ.ಜಿ.ಗೆ 98,500 ರು. ಆಗಿದೆ.
ಶುಕ್ರವಾರ ಶೇ.99.9 ಶುದ್ಧತೆ ಚಿನ್ನದ ಬೆಲೆ 20 ರು.ನಷ್ಟು ಕುಸಿದು 98,150 ರು. ಆಗಿತ್ತು ಹಾಗೂ 99.5 ಶುದ್ಧತೆಯ ಹೊನ್ನಿನ ಬೆಲೆ ಕುಸಿದು, 97,700 ರು.ಗೆ ತಲುಪಿತ್ತು.