ಚಿನ್ನದ ಬೆಲೆ 10 ಗ್ರಾಂಗೆ ದಾಖಲೆ ₹1.10 ಲಕ್ಷ

| N/A | Published : Sep 02 2025, 01:00 AM IST

ಸಾರಾಂಶ

  ಚಿನ್ನ ಮತ್ತು ಬೆಳ್ಳಿ ದರಗಳು ದಾಖಲೆ ಮಟ್ಟ ತಲುಪಿವೆ. ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ ದಾಖಲೆಯ 1,10,000 ರು.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,32,100 ರು. ತಲುಪಿದೆ. ಶನಿವಾರ ಚಿನ್ನದ ಬೆಲೆ 1.08 ಲಕ್ಷ ರು. ಮತ್ತು ಬೆಳ್ಳಿಯ ಬೆಲೆ 1,28,000 ರು.ನಷ್ಟು ಇತ್ತು.

 ನವದೆಹಲಿ: ಜಾಗತಿಕ ಆರ್ಥಿಕ ಅನಿಶ್ಚಿತತೆ ನಡುವೆಯೇ ಚಿನ್ನ ಮತ್ತು ಬೆಳ್ಳಿ ದರಗಳು ದಾಖಲೆ ಮಟ್ಟ ತಲುಪಿವೆ. ಬೆಂಗಳೂರಿನಲ್ಲಿ ಸೋಮವಾರ ಚಿನ್ನದ ದರ 10 ಗ್ರಾಂಗೆ ದಾಖಲೆಯ 1,10,000 ರು.ಗೆ ತಲುಪಿದೆ. ಬೆಳ್ಳಿಯ ದರ ಪ್ರತಿ ಕೆಜಿಗೆ 1,32,100 ರು. ತಲುಪಿದೆ. ಶನಿವಾರ ಚಿನ್ನದ ಬೆಲೆ 1.08 ಲಕ್ಷ ರು. ಮತ್ತು ಬೆಳ್ಳಿಯ ಬೆಲೆ 1,28,000 ರು.ನಷ್ಟು ಇತ್ತು.

ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಸತತ 6 ದಿನದಿಂದ ಏರಿಕೆ ಹಾದಿಯಲ್ಲಿವೆ. ಸೋಮವಾರ ದೆಹಲಿಯಲ್ಲಿ ಶೇ.99.9 ಶುದ್ಧತೆಯ ಚಿನ್ನ 10 ಗ್ರಾಂಗೆ ದಾಖಲೆಯ 1,05,670 ರು.ಗೆ ತಲುಪಿದರೆ, ಆಭರಣ ಚಿನ್ನವು (ಶೇ.99.5 ಶುದ್ಧತೆ) 800 ರು. ಏರಿಕೆಯೊಂದಿಗೆ 1,04,800 ರು.ಗೆ ತಲುಪಿದೆ ಎಂದು ಅಖಿಲ ಭಾರತ ಸರಾಫಾ ಅಸೋಸಿಯೇಶನ್ ತಿಳಿಸಿದೆ.

ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತ ಮತ್ತು ಅಮೆರಿಕದ ಸುಂಕನೀತಿಯು ಬಂಗಾರದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ತಿಳಿಸಿದ್ದಾರೆ. ಹಬ್ಬದ ಋತುವಿನಲ್ಲಿ ಚಿನ್ನ ಮತ್ತು ಬೆಳ್ಳಿಯ ಬೇಡಿಕೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

Read more Articles on