ಡೀಪ್‌ಫೇಕ್‌ ಮೂಲಕ ಅಶ್ಲೀಲತೆಯನ್ನು ಪ್ರಕಟ ಮಾಡುವ ವೆಬ್‌ಸೈಟ್‌ ಮತ್ತು ಆ್ಯಪ್‌ಗಳನ್ನು ಶಾಶ್ವತವಾಗಿ ನಿರ್ಬಂಧ ಮಾಡುವುದಾಗಿ ಗೂಗಲ್‌ ನಿಯಮ ತಿದ್ದುಪಡಿ ಮಾಡಿಕೊಂಡಿದೆ.

ನವದೆಹಲಿ: ಡೀಪ್‌ಫೇಕ್ ಆಶ್ಲೀಲತೆಯನ್ನು ಸೃಷ್ಟಿಸುವ ವೆಬ್‌ಸೈಟ್‌ಗಳು ಮತ್ತು ಆ್ಯಪ್‌ಗಳ ಪ್ರಚಾರವನ್ನು ಸ್ಪಷ್ಟವಾಗಿ ನಿರ್ಬಂಧಿಸಲು ಗೂಗಲ್ ತನ್ನ ಜಾಹೀರಾತು ನಿಯಮ ಕಠಿಣಗೊಳಿಸಿದೆ.

ಮೇ 30ರಿಂದ ಜಾರಿಗೆ ಬರಲಿರುವ ಗೂಗಲ್‌ನ ಹೊಸ ಜಾಹೀರಾತು ನಿಯಮದ ಪ್ರಕಾರ, ಜಾಹೀರಾತು ಪ್ರಕಟಿಸುವ ನೆಪದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿಕೊಂಡು ಅಶ್ಲೀಲ ದೃಶ್ಯ ಸೃಷ್ಟಿಸುವ ಜಾಹೀರಾತಿನ ಮೇಲೆ ಕಠಿಣ ಕ್ರಮ ಜರುಗಿಸಲಿದೆ.

ಗ್ರಾಹಕರು ಡೀಪ್‌ಫೇಕ್ ಪೋರ್ನ್ ವಿಡಿಯೋಗಳನ್ನು ಪ್ರಚಾರ ಮಾಡಿದರೆ ಯಾವುದೇ ಎಚ್ಚರಿಕೆ ನೀಡದೇ ಅಮಾನತುಗೊಳಿಸಲಾಗುತ್ತದೆ. ಆ ನಿಯಮಗಳನ್ನು ಉಲ್ಲಂಘಿಸುವರು ಇನ್ನುಮುಂದೆ ಯಾವುದೇ ಜಾಹೀರಾತುಗಳನ್ನು ಗೂಗಲ್‌ ನಲ್ಲಿ ಪ್ರಕಟಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಗೂಗಲ್ ಹೇಳಿದೆ.