ಸಾರಾಂಶ
ನವದೆಹಲಿ: ಪ್ರತಿಷ್ಠಿತ ಕಂಪೆನಿ ಗೂಗಲ್ ತನ್ನ ಗ್ರಾಹಕರಿಗೆ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ. ಆಂಡ್ರಾಯ್ಡ್ ಮೊಬೈಲ್ ಹೊಂದಿರುವ ಗ್ರಾಹಕರಿಗೆ ಬುಧವಾರ ಗೂಗಲ್ ವ್ಯಾಲೆಟ್ ಎನ್ನುವ ವಿಶೇಷ ಅಪ್ಲಿಕೇಶನ್ ಪರಿಚಯಿಸಿದೆ.
ಗೂಗಲ್ ಪರಿಚಯಿಸಿರುವ ಈ ವ್ಯಾಲೆಟ್‌ನಿಂದ ಬೋರ್ಡಿಂಗ್ ಪಾಸ್, ಲಾಯಲ್ಟಿ ಕಾರ್ಡ್, ಕಾರ್ಯಕ್ರಮಗಳ ಟಿಕೆಟ್ , ಸಾರ್ವಜನಿಕ ಸಾರಿಗೆ ಪಾಸ್‌ಗಳು ಸೇರಿದಂತೆ ದೈನಂದಿನ ಅಗತ್ಯಕ್ಕೆ ಬೇಕಾಗುವ ಎಲ್ಲ ದಾಖಲೆಗಳನ್ನು ಒಂದೆಡೆ ಇಡುವುದಕ್ಕೆ ಈ ಅಪ್ಲಿಕೇಶನ್ ಸೂಕ್ತವಾಗಿರಲಿದೆ. ಜೊತೆಗೆ ಗ್ರಾಹಕರ ದಾಖಲೆಗಳು ಕೂಡ ಭದ್ರವಾಗಿರಲಿದೆ.
‘ಬುಧವಾರದಿಂದಲೇ ಈ ಡಿಜಿಟಲ್ ಅಪ್ಲಿಕೇಶನ್ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಿದೆ, ಆದರೆ ಗೂಗಲ್ ಪೇಗೂ ಇದಕ್ಕೂ ನಂಟಿಲ್ಲ. ಗೂಗಲ್ ಪೇ ಪೇಮೆಂಟ್ ಆ್ಯಪ್ ಆದರೆ, ವ್ಯಾಲೆಟ್ ನಾನ್ ಪೇಎಂಟ್ ಬಳಕೆದಾರರಿಗೆ. ಈ ತಂತ್ರಜ್ಞಾನವನ್ನು ಭದ್ರತೆ ಮತ್ತು ಗೌಪ್ಯತೆ ತಳಹದಿಯ ಮೇಲೆ ಪ್ರಾರಂಭಿಸಲಾಗಿದೆ. ಇದು ಗ್ರಾಹಕರಿಗೆ ಸುರತಕ್ಷತೆ,ಮುಕ್ತತೆ ಮತ್ತು ಗೌಪ್ಯತೆನ್ನು ಒದಗಿಸುತ್ತದೆ’ ಎಂದು ಕಂಪನಿ ಹೇಳಿದೆ.
ಭಾರತದಲ್ಲಿ ಈಗ ಇಂಡಿಗೋ, ಏರ್ ಇಂಡಿಯಾ, ಫ್ಲಿಪ್‌ಕಾರ್ಟ್, ಪಿವಿಆರ್, ಐನಾಕ್ಸ್, ಕೊಚ್ಚಿ ಮೆಟ್ರೋ ಸೇರಿ 20 ಬ್ರಾಂಡ್‌ಗಳ ಜತೆ ಇದು ಒಪ್ಪಂದ ಮಾಡಿಕೊಂಡಿದೆ.
ಈಗಾಗಲೇ ಈ ಗೂಗಲ್ ವ್ಯಾಲೆಟ್ ಒಟ್ಟು 80 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.