ಸಾರಾಂಶ
ಜೆಡಿಯು ಶಾಸಕ ಗೋಪಾಲ್ ಮಂಡಲ್ ಲಂಚ ಸ್ವೀಕರಿಸಲು ಸಿದ್ಧರಿರುವುದಾಗಿ ಬಹಿರಂಗವಾಗಿ ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಪಟನಾ: ‘ಮನೆಗೆ ಲಕ್ಷ್ಮೀ ಬಂದರೆ ನಾನೇಕೆ ಬೇಡ ಅನ್ನಲಿ. ಯಾರಾದಾರೂ 5 ಕೋಟಿ ರು. ಲಂಚ ನೀಡಿದರೆ ನಾನು ತೆಗೆದುಕೊಳ್ಳುತ್ತೇನೆ’ ಎಂದು ಜೆಡಿಯು ಶಾಸಕ ಗೋಪಾಲ್ ಮಂಡಲ್ ಹೇಳಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧದ ಇ.ಡಿ. ಪ್ರಕರಣದ ಬಗ್ಗೆ ಕಿಡಿಕಾರಿದ ‘ಯಾರಾದರೂ ನನಗೆ 5 ಕೋಟಿ ರು. ನೀಡಿ, ಇಟ್ಟುಕೊಳ್ಳಿ ಎಂದರೆ, ಒಂದೇ ಒಂದು ನಿಮಿಷವೂ ಯೋಚನೆ ಮಾಡದೇ ಅದನ್ನು ಪಡೆದುಕೊಳ್ಳುತ್ತೇನೆ.
ಲಕ್ಷ್ಮಿ ತಾನಾಗಿಯೇ ಮನೆಗೆ ಬರುವಾಗ ನಾನೇಕೆ ಬೇಡ ಅನ್ನಲಿ’ ಎಂದು ಹೇಳುವ ಮೂಲಕ ಲಂಚ ಪಡೆದುಕೊಳ್ಳಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದ್ದಾರೆ.